Tuesday, 10 December 2019

ಗುರುರಾಜಾ ಗುರು ಸಾರ್ವಭೌಮ gururaja guru saarvabhoma

ಗುರುರಾಜಾ ಗುರು ಸಾರ್ವಭೌಮ ||pa||
ಗುರುರಾಜಾ ಗುರಸಾರ್ವಭೌಮ ನಿನ್ನಯ ಪಾದ
ಸರಸಿಜಯುಗಕಭಿ ನಮಿಸುವೇ ||a.pa||
ಕರುಣ ಸಾಗರನೆಂದು ಚರಣವ ನಂಬಿದೆ
ಶರಣನ ಪಾಲಿಸು ಕರುಣಿಯೇ ||1||
ಅನ್ಯರ ಭಜಿಸದೆ ನಿನ್ನನ್ನೆ ಭಜಿಸುವೆ
ಎನ್ನ ಮರೆವೊದಿದು ನ್ಯಾಯವೇ ||2||
ಬೇಡಿದ ಮನೋರಥ ನೀಡುವ – ನೀನಿರೆ
ಬೇಡೆನೆ ನರರನ್ನ ನೀಡೆಂದೂ ||3||
ಜ್ಞಾನಿ ಗಳರಸನೆ ಮೌನಿ ಶಿರೋಮಣಿ
ಧ್ಯಾನವ ಸಂತತ ನೀಡಯ್ಯಾ ||4||
ಸಂತತ ಎನ ಮನೊ – ಅಂತರದಲಿ ನೀ
ನಿಂತು ಪಾಲಿಸೊ ಎನ್ನ ಮಹರಾಯಾ ||5||
ನಿನ್ನಲ್ಲಿ ಹರಿ ದಯ – ಉನ್ನತ ಇರಲಿನ್ನು
ಎನ್ನಲ್ಲಿ ನಿನ ದಯ ಇರಲಯ್ಯ ||6||
ದಾತಗುರು ಜಗನ್ನಾಥ ವಿಠಲ ನಿನ್ನ
ಮಾತು ಲಾಲಿಸಿದಂತೆ ಪೊರೆ ಎನ್ನಾ ||7||

No comments:

Post a Comment