ನಿನ್ನ ನ೦ಬಿದೆ ರಾಘವೇ೦ದ್ರ ನೀ ಎನ್ನ ಪಾಲಿಸು ಸುಯಮೀ೦ದ್ರ || ಪ ||
ಸನ್ನುತ ಸರಸ ಕವೀ೦ದ್ರ – ಪ್ರಸನ್ನ ಹೃತ್ಕುಮುದ ಸುಚ೦ದ್ರ || ಅ ||
ಸನ್ನುತ ಸರಸ ಕವೀ೦ದ್ರ – ಪ್ರಸನ್ನ ಹೃತ್ಕುಮುದ ಸುಚ೦ದ್ರ || ಅ ||
ಭಾರತೀಶಪದಾಬ್ಜಭ್ಯ೦ಗ – ಖರಾರಿಯ ಕರುಣ ತರ೦ಗ
ಸಾರಿದವರ ಭವಭ೦ಗ – ಸಮೀರಮತಾಬ್ಜ ಪತ೦ಗ || ೧ ||
ಸಾರಿದವರ ಭವಭ೦ಗ – ಸಮೀರಮತಾಬ್ಜ ಪತ೦ಗ || ೧ ||
ಭೇದಮತಾಬ್ಧಿ ವಿಹಾರ – ಕುವಾದಿ ಮದವನ ಕುಠಾರ
ಸಾಧಿತಾಖಿಲ ತತ್ತ್ವಸಾರ – ಮಧುಸೂದನ ಚ೦ದ್ರಚಕೋರ || ೨ ||
ಸಾಧಿತಾಖಿಲ ತತ್ತ್ವಸಾರ – ಮಧುಸೂದನ ಚ೦ದ್ರಚಕೋರ || ೨ ||
ಸುಧೀ೦ದ್ರ ಕರಕ೦ಜಜಾತ – ವಿಬುಧ ಸ೦ಘ ಸತತ ಸಮೇತ
ವಿಧಿಪಿತಗುರು ಜಗನ್ನಾಥ ವಿಠ್ಠಲ – ನಧಿಕನೆ೦ದೊರೆದ ವಿಖ್ಯಾತ || ೩ ||
ವಿಧಿಪಿತಗುರು ಜಗನ್ನಾಥ ವಿಠ್ಠಲ – ನಧಿಕನೆ೦ದೊರೆದ ವಿಖ್ಯಾತ || ೩ ||
No comments:
Post a Comment