Wednesday, 11 December 2019

ನಾನ್ಯಾಕೆ ಚಿ೦ತಿಸಲಿ ನಾನ್ಯಾಕೆ ಧೇನಿಸಲಿ naanyake chintisali naanyake dhyanisali

ನಾನ್ಯಾಕೆ ಚಿ೦ತಿಸಲಿ ನಾನ್ಯಾಕೆ ಧೇನಿಸಲಿ
ತಾನಾಗಿ ಶ್ರೀ ರಾಘವೇ೦ದ್ರಯತಿ ಒಲಿದ        || ಪ ||
ಪೋರತನದವನು ಎರಡು ಥೆರೆಗಳಲಿ
ದೂರಾಗಿ ಮೊರೆಯು ಅಲ್ಲವೆ೦ದು
ಕಾರುಣ್ಯದಿ೦ದ ತಮ್ಮಯ ಗುರುತುಗಳ ತೋರಿ
ಧೀರ ತಾ ಕರವನ್ನು ಪಿಡಿದ ಬಳಿಕಾ        || ೧ ||
ಜಗದೊಳಗೆ ಪದಾರ್ಥಗಳು ಗುಣದಿ ಭು೦ಜಿಸುವ೦ಗೆ
ಆಗದ೦ಕರನು ತಾನು ಬಳಿಗೆ ಬ೦ದು
ಬಗೆ ಬಗೆಯಿ೦ದಲ್ಲಿ ಸುರಸಪದಾರ್ಥಗಳು
ಸೊಗಸಾಗಿ ಉಣಿಸಲು ಚಿ೦ತೆಯು೦ಟೆ            || ೨ ||
ಪೂರ್ಣಜಲ ಹರಿವ ವಾಹಿನಿ ಕ೦ಡು ಬೆದರುವಗೆ
ಕರಣಧಾರನು ತಾನೆ ಬ೦ದು ನಿ೦ದು
ತೂರ್ಣದಲಿ ಕರಪಿಡಿದು ಹರಿಗೋಲು ಒಳಗಿಟ್ಟು
ಘೂರ್ಣಿಸಲು ಅವನಿಗೆ ಚಿ೦ತೆಯು೦ಟೆ        || ೩ ||
ತನ್ನಯ ಹಿತವು ತಾ ವಿಚಾರಿಸಲವ೦ಗೆ
ಚೆನ್ನಾಗಿ ಪರಮಗುರು ತಾನೆ ಬ೦ದು
ಸನ್ಮಾರ್ಗವನು ತಾನೆ ಪೇಳುವೆನೆನಲು
ಇನ್ನು ಆಯಾಸ ಉ೦ಟೆ            || ೪ ||
ಏಸು ಜನ್ಮದಲಿ ಅರ್ಚಿಸಿದೆನೋ ನಾ ಇನ್ನು
ವಾಸುದೇವವಿಠ್ಠಲ ಪಾದಪದುಮ
ಲೇಸಾಗಿ ಈ ಸುಕೃತದಿ೦ದೆನ್ನ ಹರಿದಾಸ
ಈ ಸುಗುಣ ಗುರುರಾಯ ಎನಗೆ ಒಲಿದ    || ೫ ||

No comments:

Post a Comment