ಮೆರೆಯದಿರು ಮೆರೆಯದಿರು ಎಲೆ ಮಾನವ - ನಿನ್ನಸಿರಿಯ ಹವಣೇನು ಹೇಳೆಲೊ ಮಂಕು ಜೀವ ಪ
ಸಿರಿಯೊಳಗೆ ಮಾಧವನೊ ಹಿರಿಯರೊಳು ಬ್ರಹ್ಮನೋದುರುಳ ರಾವಣನ ಸಂಪದವೊ ನಿನಗೆದುರಿಯೋಧನನಂತೆ ಮಕುಟವರ್ಧನನೊ - ನಿನ್ನಸಿರಿಯ ಹವಣೇನು ಪೇಳೆಲೊ ಮಾನವ 1
ಬಲುಹಿನಲಿ ವಾಲಿಯೋ ಚೆಲುವಿಕೆಗೆ ಕಾಮನೋಸಲುಗೆಯಲಿ ನಾರದನೊ ಹೇಳು ನೀನುಕಲಿಗಳೊಳು ಭೀಷ್ಮ ದ್ರೋಣಾಚಾರ್ಯ ಫಲುಗುಣನೊಕುಲದಲ್ಲಿ ವಸಿಷ್ಠನೊ ಹೇಳೆಲೊ ಮಾನವ 2
ತ್ಯಾಗದಲಿ ಕರ್ಣನೋ ಭೋಗದಲಿ ಸುರಪನೋಭಾಗ್ಯದಲಿ ದಶರಥನೊ ಹೇಳು ನೀನುರಾಗದಲಿ ತುಂಬುರನೊ ಯೋಗದಲಿ ಸನಕನೊಹೀಗ್ಯಾರ ಹೋಲುವೆ ಹೇಳೆಲೊ ಮಾನವ3
ಯತಿಗಳಲ್ಲಗಸ್ತ್ಯನೊ ಜೊತೆಯಲಿ ಹನುಮನೊವ್ರತಕೆ ಶುಕಮುನಿಯೇನೊ ಹೇಳು ನೀನುಶ್ರುತಿಪಾಠ ವಿಬುಧರೊಳು ಸೂತನೋ - ನಿನ್ನ ಶುಭಮತಿಯ ಹವಣೇನು ಹೇಳೆಲೊ ಮಾನವ 4
ವಿದ್ಯೆಯಲಿ ಸುರಗುರುವೊ ಬುದ್ಧಿಯಲಿ ಮನುಮುನಿಯೊಶ್ರದ್ಧೆಯಲಿ ನೀನಾರ ಹೋಲ್ವೆ ಹೇಳುಸಿದ್ಧರೊಳು ನವಕೋಟಿಯೊಳೊಬ್ಬನೊ ನೀನುಕ್ಷುದ್ರ ಮಾನವ ನಿನ್ನ ಸಿರಿಯ ಹವಣೇನು5
ಗೆಲ್ಲು ಸೋಲಿನ ಮಾತು ಸಲ್ಲದೆಲವೋ ನಿನಗೆಎಲ್ಲವನು ಬಿಡು ಗರ್ವ ನಿನಗೇತಕೊಬಲ್ಲೆಯಾದರೆ ಆದಿಕೇಶವನ ನಾಮವನುಸೊಲ್ಲುಸೊಲ್ಲಿಗೆ ತುತಿಸಿ ಸುಖಿಯಾಗಿ ಬಾಳು6
No comments:
Post a Comment