Wednesday, 4 December 2019

ಕುದುರೆ ಬಂದಿದೆ Kudare bandide

ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ |ಪ|
ವಾದಿರಾಜರಿಗೊಲಿದು ಬಂದು ಸ್ವಾದಿಪುರದಲ್ಲಿ ನಿಂದ|ಅ.ಪ|
ಮುಂಗಾಲು ಕೆದರಿ ಕುಣಿವ ಕುದುರೆ ಹಿಂಗಾಲಿಲಸುರರ ಒದೆವ ಕುದುರೆ|
ರಂಗನೆಂದರೆ ಸಲಹೊ ಕುದುರೆ ತುಂಗ ಹಯವದನ ಕುದುರೆ||1||
ಹಲ್ಲಣದೊಳಗೆ ನಿಲ್ಲದು ಕುದುರೆ ಬೆಲ್ಲ ಕಡಲೆ ಮೆಲ್ವ ಕುದುರೆ|
ಫುಲ್ಲಭವನಿಗೊರೆದ ಕುದುರೆ ಚೆಲ್ವ ಹಯವದನ ಕುದುರೆ||2||
ಸುತ್ತಮುತ್ತಲಾಡುವ ಕುದುರೆ ಮತ್ತವಾದಿಯ ಗೆಲ್ವ ಕುದುರೆ|
ಶತ್ರುಗಳೆಲ್ಲರ ಬಡಿವ ಕುದುರೆ ತತ್ವ ಹಯವದನ ಕುದುರೆ||3||

No comments:

Post a Comment