ಮಣ್ಣಲಿ ಮಾಡಿದ ಮಡಕೆ ಮಸಿಯಾಗೆ
ಮಣ್ಣಿಂದಲೆ ತಿಕ್ಕೆ ಮಸಿ ಹೋಗುವುದು
ಕಣ್ಣು ಕಿವಿಗಳ ನಡಪ ಮನ ಮಲಿನವಾಗೆ
ಕಣ್ಣು ಕಿವಿಗಳಿಂದಲಿ ಮನ ತಿದ್ದಲಾಗುವುದೇ?
ಹಣ್ಣಾಗುವುದು ಮನ ಶ್ರೀಹರಿ ಧ್ಯಾನ ಮಾಡೆ
ಹುಣ್ಣಾಗಿ ಕಾಡಿಪುದು ಅವನ ಅದ ಮರೆಯೆ
ಕಣ್ಣಲಿ ಕಣ್ಣಾಗಿ ಕತ್ತಲಲಿ ಬೆಳಕಾಗಿ
ಫಣಿಶಾಯಿ ಆದಿಕೇಶವರಾಯ ಪೊರೆವÀ|
No comments:
Post a Comment