Tuesday, 17 December 2019

ಲಾಲಿಸಿದಳು ಮಗನ - ಯಶೋದೆ laalisidalu magana yashode

ಲಾಲಿಸಿದಳು ಮಗನ - ಯಶೋದೆ |
ಲಾಲಿಸಿದಳು ಮಗನ ಪ
ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು |
ತರಳನ ಮೈಸಿರಿ ತರುಣಿ ನೋಡುತೆ ಹಿಗ್ಗಿ 1

ಬಾಲಕನೇ ಕೆನೆವಾಲ ಮೊಸರನೀವೇ |
ಲೀಲೆಯಿಂದಲಿ ಎನ್ನ ತೋಳ ಮೇಲ್ಮಲಗೆಂದು 2
ಮುಗುಳು ನಗೆಯಿಂದಲಿ ಮುದ್ದು ತಾ ತಾರೆಂದು |
ಜಗದೊಡೆಯನ ಶ್ರೀ ಪುರಂದರವಿಠಲನ 3

No comments:

Post a Comment