Tuesday, 17 December 2019

ಲಾಲಿತ್ರಿಭುವನಪಾವನಲಾಲಿ laali tribhuvanap paana laali

ಲಾಲಿತ್ರಿಭುವನಪಾವನಲಾಲಿ ಪ.
ಗೋವಳ ಕುಲದೊಳು ಪುಟ್ಟಿದಗೆ ಲಾಲಿ
ಗೋವರ್ಕಳನು ಸಲಹಿದೆಗೆ ಲಾಲಿ ||
ಗೋವುಗಳನೆಲ ಕಾಯ್ದವಗೆ ಲಾಲಿ
ಗೋವಿಂದ ಪರಮಾನಂದಗೆ ಲಾಲಿ .............. ಲಾಲಿ 1
ನಖದಲಿ ಗಂಗೆಯ ಪಡೆದಗೆ ಲಾಲಿ
ಶಕಟನ ಮುರಿದು ಒತ್ತಿದವಗೆ ಲಾಲಿ ||
ಅಖಿಳ ವೇದಂಗಳ ತಂದಗೆ ಲಾಲಿ
ರುಕುಮಿಣಿಯರಸ ವಿಠಲನಿಗೆ ಲಾಲಿ ........... ಲಾಲಿ 2
ಗಗನವ ಮುರಿದು ಒತ್ತಿದಗೆ ಲಾಲಿ
ನಿಗಮಗಳನು ತಂದಿತ್ತಗೆ ಲಾಲಿ ||
ಹಗೆಗಳನೆಲ್ಲರ ಗೆಲಿದಗೆ ಲಾಲಿ
ಜಗವನು ಉದರದಿ ಧರಿಸಿದಗೆ ಲಾಲಿ ........ ಲಾಲಿ 3
ಬೊಟ್ಟಿಲಿ ಬೆಟ್ಟವನೆತ್ತಿದಗೆ ಲಾಲಿ
ಮೆಟ್ಟಿಲಿ ಭೂಮಿಯನಳೆದಗೆ ಲಾಲಿ ||
ಜಟ್ಟಿಗರನೆಲ್ಲ ಗೆಲಿದಗೆ ಲಾಲಿ
ಕಟ್ಟುಗ್ರ ಶ್ರೀ ನರಸಿಂಹಗೆ ಲಾಲಿ ...................... ಲಾಲಿ 4
ಶರಧಿಗೆ ಸೇತುವೆಗಟ್ಟಿದಗೆ ಲಾಲಿ
ಸುರರ ಸೆರೆಯನು ಬಿಡಿಸಿದಗೆ ಲಾಲಿ ||
ಕರಿಮೊರೆಯಿಡಲು ಬಂದೊದಗಿದಗೆ ಲಾಲಿ
ವರದ ಪುರಂದರವಿಠಲಗೆ ಲಾಲಿ ........... ಲಾಲಿ 5

No comments:

Post a Comment