ಹರಿಕೃಷ್ಣಾಚ್ಯುತ ಗೋವಿಂದ - ವಾಸುದೇವ |
ನರಹರಿ ಎನಬಾರದೆ ? ಪ.
ಉದಯಕಾಲದಿ ಏಳುತ - ಸಿರಿಯರಸನ |
ಒದಗಿ ಸೇವೆಯ ಮಾಡುತ ||
ತದನಂತರ ಭೋಜನದಲಿ ಸ್ಮರಿಸುತ |
ಮದಗಜಗಮನೆಯೊಳ್ ಸರಸÀವಾಡುತಲೊಮ್ಮೆ 1
ಸಿರಿ ಬಂದಡಸಿದಾಗ - ಮೆರೆಯದಿರು |
ಹಿರಿ ಹಿರಿ ಹಿಗ್ಗದಿರು ||
ನೆರೆ ಬಡತನಕೆ ಜರ್ಜರಿತನಾದೆ ನೀನು ?
ಹರಿನಾಮಸ್ಮರಣೆಯ ಮರೆಯದಿರೆಲೊ ಮನುಜ2
ದುಷ್ಟರುಪದ್ರದೊಳಾಗಲಿ - ರಣರಂಗದ |
ದಿಟ್ಟ ಸಮರದೊಳಾಗಲಿ ||
ಕಟ್ಟಾರಣ್ಯದೊಳು ಹುಲಿಯು ಬಾಧಿಸುತಿರೆ |
ಸೃಷ್ಟಿಗೊಡೆಯ ಪುರಂದರವಿಠಲ ಕಾಯ್ವ 3
No comments:
Post a Comment