Tuesday, 24 December 2019

ಹನುಮನ ಮತವೆ ಹರಿಯ ಮತವು hanumana matave hariya matavu

ಹನುಮನ ಮತವೆ ಹರಿಯ ಮತವು |
ಹರಿಯ ಮತವೇ ಹನುಮನ ಮತವು ಪ
ಹನುಮನು ಒಲಿದರೆ ಹರಿ ತಾನೊಲಿವನು |
ಹನುಮನು ಮುನಿದರೆ ಹರಿಮುನಿವ ಅ.ಪ
ಹನುಮನ ನಂಬಿದ ಸುಗ್ರೀವ ಗೆದ್ದ |
ಹನುಮನ ನಂಬದ ವಾಲಿಯು ಬಿದ್ದ 1
ಹನುಮನು ಒಲಿದ ವಿಭೀಷಣ ಗೆದ್ದ
ಹನುಮನು ಮುನಿಯಲು ರಾವಣ ಬಿದ್ದ 2
ಹನುಮನು ಪುರಂದರ ವಿಠಲನ ದಾಸ|
ಹನುಮನೊಳ್ ಪುರಂದರ ವಿಠಲನಾವಾಸ 3

No comments:

Post a Comment