Thursday, 12 December 2019

ಅಕಿಂಚನಗೆ ಅನಘ್ರ್ಯವಾದಂತೆ akinchanage anarghyavadante

ಅಕಿಂಚನಗೆ ಅನಘ್ರ್ಯವಾದಂತೆ |
ಅರತಂಗೆ ಆರತವಾದಂತೆ |
ಅಂಧÀಕಂಗೆ ಅಕ್ಷಿಯಾದಂತೆ |
ಅರವಿಂದಕಾದಿತ್ಯನಾದಂತೆ |
ಅಳಿಗೆ ಅಮರಾಂಘ್ರಿಪವಾದಂತೆ |
(ಆ) ಅಪುಣ್ಯಕ್ಕೆ ಅಮೃತವಾದಂತೆ |
ಅಯ್ಯ ಅಕಿಂಚನಗೆ ಅನಘ್ರ್ಯವಾದಂತೆ |
ಅಪಾರ ಸಂಸಾರ ಭಯಭೇದ |
ಅನೇಕದ ಅದಿಪತಿಯಾದ |
ಪುರಂದರವಿಠಲರಾಯ |
ಎನಗೆ ನಿನ್ನ ಸಿರಿ ನಾಮ ದೊರಕಿಸು ದೇವಾ 1
ಮಟ್ಟತಾಳ
ಅಕಳಂಕ ಚರಿತ ನಮೋ ನಮೋ |
ಸಕಲ ಸ್ವರೂಪ ನಮೋ ನಮೋ |
ಭಕುತವತ್ಸಲ ನಮೋ ನಮೋ |
ಬಕವಿದಾರಣ ನಮೋ ನಮೋ |
ಅಕುತೋಭಯ ನಮೋ ನಮೋ |
ರುಕುಮಿಣೀಪತಿ ಪುರಂದರವಿಠಲ ನಮೋ ನಮೋ 2
ಏಕತಾಳ
ಹೃದಯಕಮಲದಲ್ಲಿ ನಾ ನಿನ್ನ ಪಾದ- |
ಪದುಮವ ನೆನೆವಂತೆ ಮಾಡು |
ಯದುರಾಜಾಧಿರಾಜ ಸುದರುಶನಧರ |
ಇದನೆ ಕೃಪೆ ಮಾಡೆನಗೆ |
ಮದನಪಿತ ಪುರಂದರವಿಠಲರಾಯ 3
ಅಟ್ಟತಾಳ
ಮನೆಯಾಕೆ ಮನ್ನಣೆಗೆಡೆಸುತಲಿದೆಯೆನ್ನ- |
ಮನೆ ಮನೆವಾರತೆಯಾಶೆ ಬಲು ಬಾಧಿಸುತಿದೆ |
ಧನದಾಶೆ ದೈನ್ಯ ಬಡಿಸುತಿದೆ |
ವನಿತೆಯರಾಶೆ ಒಡಲ ಸುಡುತಿದೆ |
ಇನಿತಾಶೆಯ ಬಿಡಿಸು ಬುದ್ಧಯಲಿ ನಿನ್ನ |
ನೆನೆವಂತೆ ಮಾಡೆನ್ನ ಪುರಂದರವಿಠಲ 4
ಝಂಪೆತಾಳ
ಮೊರೆಹೊಕ್ಕವರ ಕಾವ ಮಾರಾಂತರನಿರಿವ |
ದೇವ ನಿನಗಿಲ್ಲದುಂಟೆ ಸಚರಾಚರದೊಳು |
ನಿನಗಲ್ಲದುದುಂಟೆ ನಾ ನಿನ್ನ ಮೊರೆ ಹೊಕ್ಕೆನಯ್ಯ |
ನೀ ಎನ್ನ ಕಾಯ್ದುಕೋ ಪುರಂದರವಿಠಲ ರಾಮ. 5
ಜತೆ
ನಿತ್ಯಾನಿತ್ಯಸುವಸ್ತುಗಳೊಳಗೆ |
ನಿತ್ಯ ಸುನಿತ್ಯ ಪುರಂದರ ವಿಠಲ ||

No comments:

Post a Comment