Thursday, 12 December 2019

ಅಚ್ಯುತ ಸುಳಿದ ಎನ್ನ ಕಣ್ಣ ಮುಂದೆ ಅವ್ವ achyut sulida enna munde

ಅಚ್ಯುತ ಸುಳಿದ ಎನ್ನ ಕಣ್ಣ ಮುಂದೆ ಅವ್ವ |
ಅನಂತ ಸುಳಿದ ಎನ್ನ ಕಣ್ಣ ಮುಂದೆÀ ಅವ್ವ |
ಕಸ್ತೂರಿಮೃಗದಂತೆ ಘಮ ಘಮಿಸುತ |
ನಗುತ ನೋಡುತ ನುಡಿಯುತ ನುಡಿಸುತ |
ಏನೆಂಬೆನವ್ವ ಸೆರೆಗೊಂಡ ಸೂರೆಗೊಂಡ |
ಉಮ್ಮತ್ತೂರ ಚನ್ನಯ ಪುರಂದರವಿಟಲ 1
ಮಟ್ಟತಾಳ
ಮಧುರಾಪಟ್ಟಣದ ರಾಜಬೀದಿಯಲಿ |
ಧಾಮ-ಸುಧಾಮರೆಲ್ಲ ಕೈಹೊಡೆದು ನಗಲು |
ಕುಬುಜೆಯ ಕೂಡ ತನ್ನ ಕಾಕುಪೋಕಿತನ ಮಾತು |
ಸನ್ನೆ-ಸನ್ನೆಯ ನೋಟ ನೂಕುತಾಕಿನಾಟ |
ಉಮ್ಮತ್ತೂರ ಚೆನ್ನಯ ಪುರಂದರ ವಿಠಲ 3
ತ್ರಿವಿಡೆತಾಳ
ಸುಳಿದರೆ ಸುಂಕವ ಕೊಂಬ ಪುಂಡಗಾರ |
ಹರಿಯಲ್ಲದಾರು ಹೇಳೆಲೆ ಅವ್ವ |
ಯಶೋದೆ ರಂಗನಲ್ಲದೆ ಗೋಪಮ್ಮ |
ಕೃಷ್ಣನಲ್ಲದೆ ಅದಾರು ಹೇಳೆ |
ಉಮ್ಮತ್ತೂರ ಚೆನ್ನಯ ಪುರಂದರವಿಠಲ | 4
ಅಟ್ಟತಾಳ
ಕೊಂಬುಕೊಳಲು ತುತ್ತುರಿ ಮೌರಿಯಗಳು |
ಭುಂ ಭುಂ ಭುಂ ಭುಂ ಭೋರಿಡುತ |
ಸರಿಗಮಪಧನಿಸ ಸನಿದಪಮಗರಿಸ |
ತು ತ್ತು ತ್ತು ರು ರು ರು ಎನುತ ಮಧುರೆಯೊಳು |
ಕೊಳಲನು ಪಿಡಿಯುತ ಝಣ ಝಣ ಸಣ ಸಣ |
ಗೆಜ್ಜೆಯ ಕುಣಿಸುತ ಉಮ್ಮತ್ತೂರ ಚೆನ್ನಯ |
ಪುರಂದರವಿಠಲ 4
ಆದಿತಾಳ
ಆರಮುಡಿಯನ್ನುಟ್ಟೆ ಆರಗಂಧವನ್ನಿಟ್ಟೆ? |
ಆರ ಪೂಗಳ ಮುಡಿದೆ ಆರ ರಾಜ್ಯ ವ- |
ನಾರಿಗಿತ್ತು ಮೆರೆದೆ ದೇವ? |
ಬಲ್ಲಿದರಿಗೆ ಬಟ್ಟಿ ಸಸಾರವೆಂಬಂತೆ |
ಉಮ್ಮತ್ತೂರ ಪುರಂದರ ವಿಠಲ 5
ಜತೆ
ಅಸುರರ ಸಂಹರಿಸೆ ಸುರರ ಪಾಲಿಪ ನಮ್ಮ |
ಉಮ್ಮತ್ತೂರ ಪುರಂದರವಿಠಲ ||

No comments:

Post a Comment