Friday, 13 December 2019

ಆಳುಗಳ ಪರಿಯ aalugala pariya

ಆಳುಗಳ ಪರಿಯ ಆಳಿದನೆ ಬಲ್ಲ |
ಆಳಿದನ ಪರಿಯ ಆಳುಗಳೆ ಬಲ್ಲರು |
ಆಳುಗಳ ಪರಿಯ ಆಳಿದನೆ ಪರಿಯ |
ಆರೇನನೆಂದರೂ ಆರೇನ ಮಾಡುವರಯ್ಯ |
ಆರ ಕೊಂಡೆಮಗೆ ಏನ ಮಾಡುವುದಯ್ಯ |
ಆರುಮುನಿದೆಮ್ಮನು ಏನು ಮಾಡುವರಯ್ಯ |
ಸಿರಿ ಪುರಂದರ ವಿಠಲಗೆ ನಮಗೆ |
ಇಂದೆ ಬಂದಿತೆ ಸ್ವಾಮಿ-ಭೃತ್ಯ ಸಂಬಂಧ? 1
ಮಟ್ಟತಾಳ
ಮಧುರೆಯೊಳಗೆ ನಿನ್ನ ತುಂಟಾಟಿಕೆಗಳ ನೋಡ |
ಉದ್ಧವನೆತ್ತ, ಕುಬುಜೆಯ ಮನೆಯೆತ್ತ |
ನೀ ಮಾಡಿದ ಮರ್ಯಾದೆ ಪುರಂದರ ವಿಠಲ |
ಉದ್ಭವನೆತ್ತ || 2
ಧ್ರುವತಾಳ
ಉಳ್ಳವರುಂಡಾರು ಮರೆಯ ಮರೆಯ |
ಬಲ್ಲಿರ್ದನಾಳುಗಳು ತಲೆಯಲಿ ನುಡಿದರೇನೆಂಬೆ |
ಬಲ್ಲಿರ್ದನಾಳುಗಳು ದಟ್ಟಿಯಲಿ ನಡೆದರೇನೆಂಬೆ |
ಬಲ್ಲಿರ್ದ ಪುರಂದರ ವಿಠಲನಾಳುಗಳು 3
ಅಟ್ಟತಾಳ
ಬೆಟ್ಟತಂದಾ ದೈವವು ಹೊಂದಿದ್ದ |
ಕಟ್ಟಾ ಸಮುದ್ರದ ನಂಟನಾಗಿ ಉಪ್ಪಿನ ಬರ ಕಂಡ |
ಅರಸಿನ ಮಗ ತಿರುತಿನುತಿಹದ ಕಂಡ |
ನಿನ್ನ ತೊಂಡನು ನಿನ್ನ ತೊಂಡನು ನಿನ್ನ ತೊಂಡನಾಳುವ |
ನೀನಾಳುವೆ ನಿನ್ನ ತೊಂಡ ನಾನು ಬರಿಯ ಮಾತಲ್ಲ |
ವಿಠಲ ನಿನ್ನಾಣೆ ನಿನ್ನ ತೊಂಡ ನಾನು ಪುರಂದರ ವಿಠಲ 4
ಜತೆ
ನಿತ್ಯಾನಿತ್ಯ ಸುವಸ್ತುಗಳೊಳಗೆ |
ನಿತ್ಯ ಸುನಿತ್ಯ ಪುರಂದರ ವಿಠಲ ||

No comments:

Post a Comment