Friday, 1 November 2019

ಪಾಲೊಳಗದ್ದು ನೀರೊಳಗದ್ದು paalolagaddu Neerolagaddu

ಪಾಲೊಳಗದ್ದು ನೀರೊಳಗದ್ದು ಹರಿನಾ ನಿನ್ನ ನಂಬಿದೆನೋ ಪ
ಜಲಜನಾಭ ನೀನಿಟ್ಟ ತೆರದಲ್ಲಿ ಇರುವೆನಯ್ಯ ಅ.ಪ
ಸುಖದುಃಖದೊಳಗಿಡು ಸುಕೃತ ದುಷ್ಕøತ ಮಾಡುನಿಖಿಳ ದುರಿತದೊಳೆನ್ನನೋಲ್ಯಾಡಿಸುಅಖಿಳ ಖಿಳನೆನಿಸು ಅಭಯ ಭಯವ ಸೂಸುಮಕರಕುಂಡಲ ನಿನ್ನ ಮತವೆ ಸನ್ಮತವಯ್ಯ1
e್ಞÁನಾe್ಞÁನದೊಳಗಿಡು ಮಾನಾಪಮಾನವೆ ಮಾಡುಅನಾಥ ನಾಥರೊಳೆನ್ನ ಅನವರತಾಗಿರಿಸುದೀನಾದೀನತೆಯೊಳಗೆನ್ನ ನೀನೀಡ್ಯಾಡುಶ್ರೀನಾಥ ನಿನ್ನಯ ಮತ ಮತವೆ ಸನ್ಮತವಯ್ಯ 2
ಪ್ರಾಣಾಪಾನ ವ್ಯಾನೋದಾನ ಸಮಾನಂಗಳ ಭೇದಿಸುಘನ ದಾರಿದ್ಯ್ರದಿ ನೂಕು ಸುಖವೆ ಸುರರೊಳಗ್ಹಾಕುಮುನಿಜನರ ಸಂಗ ಪೊರೆವ ರಂಗವಿಠಲನಿನ್ನಯ ಮತ ಮತವೆ ಸನ್ಮತವಯ್ಯ 3

No comments:

Post a Comment