Thursday, 28 November 2019

ನಿನ್ನ ನಾಮ ninna naman valmiki

ನಿನ್ನ ನಾಮ ವಾಲ್ಮೀಕಿಯನುದ್ಧರಿಸಿದೆ ದೇವನಿನ್ನ ನಾಮ ಘಂಟಾಕರ್ಣನ ಸಲಹಿದೆ ದೇವನನ್ನನೀಗ ಉದ್ಧರಿಸು ರಂಗಧಾಮ ಪ
ತಂದೆಯ ಮುಂದೆ ಮಗನನು ಬೈದು ಭಂಜಿಸಲುತಂದೆಯ ಮುಂದೆ ಪತ್ನಿಯ ಪಿಡಿದೆಳೆದು ಅಂಜಿಸಲುಕುಂದು ಗಂಡಗಲ್ಲದೆ ಹೆಂಡತಿಗುಂಟೆನಿಂದನೆ ಎಲೆ ದೇವ1
ದೊರೆ ನೋಡುತಿದ್ದಂತೆ ಬಂಟನನುಪರರು ಕೊಂಡೊಯ್ಯಲು ಕುಂದುಅರಸಗಲ್ಲದೆ ಆಳಿಗೇನುಅರಿಯಂತೆ ಬಂದೆನ್ನ ನಡವಳಿಯಲಿ ಸ್ವಾನದುರಿತಂಗಳೆಲ್ಲ ಕಾಡುತಿವೆ ಪರಿಹರಿಸು ಎಲೆ ದೇವ 2
ಊದುವ ಕಾಳೆಯದನರ್ಥಕವಾದಲ್ಲಿ ನುಡಿಸುವ ಬಿರುದು ಒಡೆಯಂಗಲ್ಲದೆಮಾಧವನೆ ಎನ್ನ ನಡವಳಿಯಲ್ಲಿ ಹುರುಳಿಲ್ಲಓದುವುದು ನಿನ್ನ ನಾಮಸ್ಮರಣೆಯೆ ಎಲೆ ದೇವಆದರಿಸು ನಿನ್ನ ಲೆಂಕನ ಪ್ರತಿ ಲೆಂಕನಭೇದವೇತಕೆ ನಿನ್ನ ದಾಸ ನಾನು ಬಾಡದಾದಿ ಪ್ರಸನ್ನ ಕೇಶವನೆ ಎನಗಾದ ದುರ್ಮತಿಯ ಪರಿಹರಿಸು ಎಲೆ ದೇವ 3

No comments:

Post a Comment