Wednesday, 6 November 2019

ಏನು ಹೇಳಲಿ ಕೂಸಿನ enu helali koosina

ಏನು ಹೇಳಲಿ ಕೂಸಿನ ಚರ್ಯಮಾನಿನಿ ಉಳಿದದ್ದ ಆಶ್ಚರ್ಯ ಪ
ಪುಟ್ಟಿದೇಳನೆಯ ದಿನವೆ ಬಾಲಗ್ರಹ ಬಂದುಎಷ್ಟು ಕಾಡಿದಳು ನಮ್ಮಪ್ಪನಸೃಷ್ಟಿಪಾಲಕ ಸಿರಿವಿಷ್ಣು ದಯದಿಂದಕಷ್ಟ ಕಳೆದು ನಮ್ಮ ಕೂಸು ಉಳಿದಿತೇ 1
ಒಂದು ಮಾಸದ ಕೂಸು ಅಂದು ಬಂಡಿಯ ಕೆಳಗೆಹೊಂದಿಸಿ ಮಲಗಿಸಿದ್ದೆನೇ ನಾನುಅಂದು ಹಸಿದು ಮುಖದಿಂದ ಬೆರಳನೆ ಚೀಪಿಬಂಧ ಕಳೆದು ಹೀಂಗೆ ಬದುಕಿತೇ 2
ದುಷ್ಟತನವು ಬಹಳ ಎಂದು ಒರಳಿಗೆಕಟ್ಟಿಹಾಕಿದೆ ಇವನ ಒಂದಿನಾಬೆಟ್ಟದಂತೆರಡು ಮರಗಳು ಬೀಳಲು ಮಧ್ಯ ಪುಟ್ಟ ನಮ್ಮಪ್ಪ ಹ್ಯಾಂಗೆ ಬದುಕಿತೆ 3
ಅಂಗಳದೊಳಗೆ ಆಡುತ ಕುಳಿತಿದ್ದ ಕೂಸಿನಾ-ಮಂಗಳಾ ಘಾಳಿ ಬಂದೊಯಿತೆಅಂಗನೇರೆಲ್ಲರೂ ಅಳುತ ಕೂತೇವಲ್ಲೆ ನರ-ಸಿಂಗನಾ ಕರುಣದಿಂದುಳಿದಿತೆ 4
ನೀರು ಕುಡಿದು ಯಮುನೆ ಮೇಲೆ ಆಡಲು ಕೂಸುಘೋರ ಪಕ್ಷಿಯು ಬಂದು ನುಂಗಿತೆಪೋರರೆಲ್ಲರು ನೋಡಿ ಗಾಬರಿಯಾಗಲು ಮತ್ತೆಕಾರಿತವನ ಬಕ ಸೋಜಿಗವೆ 5
ಕತ್ತೆಗಳನು ಕೊಂದು ತಾಳಫಲವು ಗೋಪ-ಪುತ್ರರಿಗೆ ಉಣ್ಣ ಕೊಟ್ಟಿಹನಂತೆಚಿತ್ರಚರಿತನ ನಂದಬಾಲನ ಚರಿತೆ ಏಕಾವೃತದಿಂದಲಿ ಪೇಳಲಳವೇನೆ 6
ಕರುಗಳ ಕಾಯುತಿರಲು ವತ್ಸವೇಷದಿದುರುಳನೊಬ್ಬನು ಬಂದಿಹನಂತೆಅರಿಯದಾ ಕೂಸಿನಾ ಕಾಲ್ಪಿಡಿದುಬೆರಳ ಮರದ ಮೇಲಕ್ಕೆ ತೂರಿದನಂತೆ 7
ಏಳೇ ವರ್ಷದವ ಕೇಳೆ ಗೋವರ್ಧನಏಳು ದಿವಸ ಎತ್ತಿದನಂತೆಬಾಳುವ ಗೋಪಿಯರ ಪಾಲನೆ ಮಾಡಿದನೀಲವರ್ಣನ ಎಷ್ಟು ವರ್ಣಿಸಲೆ 8
ಬಾಲನಾದರು ನಿನ್ನ ಹಾಳು ದೈತ್ಯನ ಕೊಂದು ಬ-ಹಳ ಕುತ್ತುಗಳಿವೆ ಕೇಳಿದೇನೆಬಾಲಕರಿಬ್ಬರು ಲೋಲರಿಬ್ಬರು ನಮ್ಮ ಬಾಲಕರೇನೇ ಸ್ವರ್ಗಪಾಲನು ಇಳೆಯೊಳು ಉದಯಿಸಿದನೇ 9
ಮಂದಗಮನೆ ಎನ್ನ ಕಂದನಾಟಗಳನ್ನುಮಂದಿಯ ದೃಷ್ಟಿಯ ಭಯದಿಂದ ನಾನುಒಂದೂ ಹೇಳದೆ ಹೀಗಾನಂದ ಬಡುವೆನು ನಾನುಚಂದ್ರವದನೆ ರೋಹಿಣಿ ಕೇಳೆ 10
ಮುಂದೆ ಬಿದ್ದ ಕುರುಳು ಹಿಂದೆ ಮಾಡುತ ಗೋಪಿಕಂದನಾ ಮುದ್ದಿಸುತ್ತಿಹಳುಇಂದಿರೇಶನ ಚರಿತೆ ಒಂದೊಂದು ರೋಹಿಣಿಗೆಇಂದು ಹೇಳುತ ಗೋಪಿ ಸುಖಿಸುತಿಹಳು 11
_____

No comments:

Post a Comment