ಏನು ಹಾವಳಿ ಮಾಡುತಿಹನಮ್ಮ ಗೋಪಮ್ಮ ಕೇಳೆಏನು ಹಾವಳಿ ಮಾಡುತಿಹನಮ್ಮ ಪ
ಏನು ಹಾವಳಿ ಮಾಡುತಿಹಮನೆ ಓಣಿಯಲಿ ಕ್ರೀಡಿಸುವ ಮಕ್ಕಳನುತಾನು ಅಳಿಸುವ ಹಿಡಿಯ ಪೋಗಲುವೇಣುನೂದುತ ಮೋಹಿಸುವನು ಅ.ಪ.
ಮನಿಯೊಳು ತಾ ಪೊಕ್ಕು ನೋಡುವನೆ ಪಾಲ್ಮೊಸರ ಕೊಡಗಳಮನಸಿನಂದದಿ ತಿಂದು ಒಡೆಯುವನೆತಿನಿಸಿ ಬೆಕ್ಕಿಗೆ ಕ್ಷಣವು ತಡೆಯದೆ ವನಿತೆರೆಲ್ಲರು ಹಿಡಿಯ ಕೂಸಿನತನುವು ಧರಿಸಿ ನಿಂತ ಕಟಿಯಲಿ ಸ್ತನವ ತಿಂಬುವ ವನರುದೇಕ್ಷಣ1
ತರುಗಳಾಲಯದಲ್ಲಿ ತಾ ಬರುವಕರೆಸದಲೆ ಮುಂಚಿತ ತೊರಿಸಿ ಮೊಲೆಗಳ ಪಾಲ ತಾ ಕುಡಿದಕರಸಿಕೊಳ್ಳದೇ ಸುರಭಿ ತಿರುಗಲು ಸರಣಿಯೊಳು ತಾ ನಿಂತು ನಗುತಲಿ ತರುಣಿಯರ ಹೆರಳ್ಹಿಡಿದುಜಗ್ಗುತ ಕರದಿ ಸಿಗದಲೆ ಭರದಿ ಓಡುವ 2
ಕೂಸಿನಂದದಿ ತೊಡೆಯೊಳಾಡುವನೆ ಕ್ಷಣದೊಳಗೆ ಪತಿಗಳವೇಷಧರಿಸಿ ಮೋಸ ಮಾಡುವನೆತಾಸು ಘಳಿಗೆ ಬಿಡದೆ ನಮ್ಮ ನಿವಾಸ ಮಾಡುತ ಕಾಡುತಿಹಇಂದಿರೇಶವಚ್ಛವ ಸಾಕು ಮಾಡು ಹೇ ಶುಭಾಂಗಿ3
No comments:
Post a Comment