Thursday, 17 October 2019

ಸೂರ್ಯ ಸುಗುಣಾರ್ಯ ।। ಪ ।। ಶ್ರೀ ವಿಜಯೀ೦ದ್ರಾರ್ಯ vijayendrarya

ಸೂರ್ಯ ಸುಗುಣಾರ್ಯ ।। ಪ ।।
ಶ್ರೀ ವಿಜಯೀ೦ದ್ರಾರ್ಯ ಸದ್ವೈಷ್ಣವ ಕಮಲಕೆ ।। ಆ. ಪ ।।
ಮೃಡದೇವ ನಾನೆಂದು ।
ಅಡಿಗಡಿಗೆ ನುಡಿಯುವ ।
ಕಡು ಮೂರ್ಖ ಮಾಯಿಗ್ರಂಥ ।
ಕಡಲ ಶೋಷಿಪುದಕೆ ।। 1 ।।
ಮೂಲ ಮೂವತ್ತೇಳು ।
ಪೇಳಿದ ಮಧ್ವಮುನಿ ।
ವಾಲಾಗದಲ್ಲಿರೆ ।
ಶೀಲ ಚಕ್ರವಾಕಕ್ಕೆ ಸೂರ್ಯ ।। 2 ।।
ಅರವತ್ತು ಮೂರೊಂದು ।
ಪಿರಿದು ವಿದ್ಯೆಯ ತೋರಿದ ।
ಪರಮ ಪುರುಷನಿಪ್ಪ ।
ಸುರಗಿರಿ ಸುತ್ತುತ್ತಿಪ್ಪ ।। 3 ।।
ಅಪ್ಪಯ್ಯ ದೀಕ್ಷಿತನ ।
ತಪ್ಪು ನುಡಿಗಳನ್ನು ।
ಒಪ್ಪಿಸಿ ಶ್ರುತಿಯಿಂದ ಮುಖ ।
ಕಪ್ಪು ಮಾಡಿದ ಸೂರ್ಯ ।। 4 ।।
ಕ್ಷೋಣಿಯಲ್ ವರ । ಕುಂಭ ।
ಕೋಣಿ ಸಾರಂಗ । ಚಕ್ರ ।
ಪಾಣಿ ಪದಕಂಜ ।
ಕಾಣಿಸಿ ಕೊಡುವಂಥ ।। 5 ।।
ಶ್ರೀ ಜಾನಕೀಶ । ಪದಾಂ ।
ಬುಜ ಮಧುಪಾ । ವಿ ।
ರಾಜಿ ತನವ ಭಕ್ತಿ ಮಾನದಂಧ
ಕಾರಕೆ ಸೂರ್ಯ ।। 6।।
ಪಂಕಜಾಕ್ಷ ಪ್ರಸನ್ನ ।
ವೆಂಕಟ ವಿಠಲನ ।
ಕಿಂಕರರಿಗೆ । ಭ ।
ಯಂಕರ ಬಿಡಿಸುವ ಸೂರ್ಯ ।। 7 ।।

No comments:

Post a Comment