ಕರುಣಿಯೆಂಬೆ ಕರುಣಾಬ್ಧಿಯೆಂಬೆ ಶರಣು ಶರಣೆಂಬೆ ||ಪ||
ಪರಮ ಭಾಗವತರ ಅರಿಗಳ ತರಿದು ನೀ
ನರಕ ತಪ್ಪಿಸಿ ನಿಜ ಪುರಕೊಯ್ಯುವೆಯೆಂದು ||ಅಪ ||
ನರಕ ತಪ್ಪಿಸಿ ನಿಜ ಪುರಕೊಯ್ಯುವೆಯೆಂದು ||ಅಪ ||
ತಾಯಿಯೆಂಬೆ ತವರೂರೆಂಬೆ ತ್ರಾಹಿ ತ್ರಾಹಿ ಎಂಬೆ
ಬಾಯೆಂಬೆ ಮಾನವರ ಘಾಯಗಾಣಿಸುತಿರೆ
ನೀಯಜಾಮಿಳಗಾಶ್ರಯನಿತ್ತೆಯೆಂದಿ ||೧||
ಬಾಯೆಂಬೆ ಮಾನವರ ಘಾಯಗಾಣಿಸುತಿರೆ
ನೀಯಜಾಮಿಳಗಾಶ್ರಯನಿತ್ತೆಯೆಂದಿ ||೧||
ತಾತನೆಂಬೆ ಅದ್ಯಾಪ್ತನೆಂಬೆ ನಾಥನಾಥೆಂಬೆ
ಪಾತಕ ಕೌರವರಾಂತಕ ಬಿಡಿಸಿ ಸಂ-
ಪ್ರೀತಿಲಿ ಪಾಂಡವರ ಕಾಯುವೆಯೆಂದು ||೨||
ಪಾತಕ ಕೌರವರಾಂತಕ ಬಿಡಿಸಿ ಸಂ-
ಪ್ರೀತಿಲಿ ಪಾಂಡವರ ಕಾಯುವೆಯೆಂದು ||೨||
ಏಕನೆಂಬೆ ಅನೇಕನೆಂಬೆ ಸಾಕು ಸಾಕು ಎಂಬೆ
ಶ್ರೀ ಕಾಂತ ಪ್ರಸನ್ವೆಂಕಟೇಕಾಂತ ದಾಸರ
ಬೇಕಾಗಿ ದಡಾ ನೂಕುವೆಯೆಂದು ||೩||
ಶ್ರೀ ಕಾಂತ ಪ್ರಸನ್ವೆಂಕಟೇಕಾಂತ ದಾಸರ
ಬೇಕಾಗಿ ದಡಾ ನೂಕುವೆಯೆಂದು ||೩||
No comments:
Post a Comment