Monday, 7 October 2019

ವಿಜಯರಾಯರ ಪಾದ Vijayadasara paada

ವಿಜಯರಾಯರ ಪಾದ ಭಜಿಸಿದವಗನವರತವಿಜಯವಾಗುವದಕ್ಕೆ ಸಂದೇಹವ್ಯಾಕೆ ||pa||
ಗಜರಾಜ ವರದನಿಗೆ ನಿಜದಾಸರೆಂದೆನಿಸಿದ್ವಿಜಕುಲದಲ್ಲಿ ಮೆರೆವರಾ ಯಿವರ ||a.pa||
ಮೊದಲು ಋಷಿಗಳು ಕೂಡಿ ಸತ್ರಯಾಗವ ನಾಕನದಿಯ ತೀರದಲಿ ರಚಿಸಿ ಯಿರಲು ||
ಪದುಮ ಸಂಭವನಂಶ ಭವ ಬಂಧು ಮುನಿವೃಂದಹೃದಯ ಸಂಶಯ ಹೊಂದಲು
ವಿಧಿ ವಿಷ್ಣು ಶಿವರೊಳಗೆ ಉತ್ತಮರ ತೋರದಲೆಮದಡ ಭಾವವ ವೊಹಿಸಲು ||
ಒದಗಿ ಭೃಗುಮುನಿಗಳೇ ಸರ್ವೇಶ ವೈಕುಂಠಸದನನೆಂದರುಹಿದವರೊ ಯಿವರೊ ||1||
ಆ ದೇವಮುನಿ ಪುರಂದರ ದಾಸರಾಗಿ | ಈ |ಮೇದನೀ ತಳಕೆ ಬರಲೂಸಾಧು
ಸಮ್ಮತವಾದ ಪದಪಂಚಲಕ್ಷಕೆ (ತ್ರಿ)ಪಾದವೇ ನ್ಯೂನವಿರಲು | ಆ |
ಪಾದವನು ಪೂರ್ತಿಪರು ಮತ್ಪುತ್ರರಿವರೆಂದುಆದಿಯಲಿ ಸೂಚಿಸಿರಲೂ ||
ಭೂದೇವ ಜನ್ಮದಿಂದಾ ದಾಸರಭಿಲಾಷೆಸಾಧಿಸಿದ ಸದಯರಿವರೊ ಯಿವರೊ ||2||
ವೀ ಯೆನಲು ವಿಮಲತೆಯು ಜ ಯೆಂದವಗ ಜಯವುಯ ಯೆನಲು ಯಾಗಫಲವುರಾ
ಯೆನಲು ರಾಜ್ಯವು ಯ ಯೆನಲು ಯಮಭಟರುನೋಯಿಸರು ಯಿವನ ಕುಲವೂ ||
ಈ ಯಾವದಕ್ಷರವ ಓಂಕಾರ ಸಹ ಪಠಿಸೆಕಾಯಭವ ಪಿತನ ಬಲವೊ ||
ಜಾಯಾ ಸಮೇತ ಮೋಹನ್ನ ವಿಠಲನ ಪಾದತೋಯಜ ಭ್ರಮರರಿವರೊ ಯಿವರೊ ||3||

No comments:

Post a Comment