Monday, 7 October 2019

ವಿಜಯದಾಸರ ಭಜನೆ Vijayadasara Bhajane

ವಿಜಯದಾಸರ ಭಜನೆ ಮಾಡಿರೊ |
ವಿಜಯದಾಸರ ಭಜನೆ ಮಾಡಲುಅಜನ ಜನಕ ನಿಜನಿಗೊಲಿದುಕುಜನ ಸಂಗತಿ
ತ್ಯಜನ ಮಾಡಿಸಿಸುಜನರ ಪಾದಾಂಬುಜದಲ್ಲಿಡುವ ||pa||
ಶುದ್ಧ ಮಂದರನ್ನ ಉದ್ಧಾರಾರ್ಥವಾಗಿಮಧ್ವರಾಯರ ಮತಾಬ್ಧಿಯೊಳು ಪುಟ್ಟಿಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳಹೆದ್ದೈವವೇ ಅನಿರುದ್ಧನು ಯೆಂದು ||
ಪದ್ಧತಿಂದ ಪೇಳಿಸಿದಿ ವೈಷ್ಣವರನ್ನಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿಹದ್ದನ್ನೇರಿ ಬಪ್ಪ ಪದ್ದುಮನಾಭನ್ನಹೃದ್ದಯದೊಳಗಿಟ್ಟ ಸದ್ಗುರುರಾಯ ||1||
ಭೂಸುರಾಬ್ಧಿಗೆ ತಾರೇಶನಂತೊಪ್ಪುವಸಾಸಿರ ನಾಮದ ಶೇಷಗಿರಿ ಶ್ರೀ ನಿ-ವಾಸನ ಯಾತ್ರೆಯ ಲೇಸಾಗಿ ಮಾಡ್ಯೆತಿ ಸ- |ಹಾಸ ಸಂತೋಷದಿಂದಲೆ ||
ವಾಸುದೇವನ ಮಾನಸದೊಳಿಟ್ಟು ದು-ರಾಶೆಯ ತೊರೆದು ಕ್ಲೇಶವ ಪಡದಲೆಮೀಸಲ ಪುಣ್ಯದ ರಾಶಿ ಘಳಿಸಿಕೇಶವನ ನಿಜ ದಾಸನೆಂದೆನಿಪ||2||
ಪುರಂದರ ದಾಸರ ವರ ಕುಮಾ-ರರವಿಂದ ಪಾದ ಶಿರದಿ ಧರಿಸಿಹರಿ ನಾಮೋಚ್ಚರಣೆ ಮಾಡುತ್ತಹರುಷದಿಂದ ಪದ ರೂಪದಿ ||
ಧರೆಯೊಳಗೆಲ್ಲ ದುರ್ಜನರರಿಯಂದೆನಸಿಮೆರೆವುತ್ತ ನಿತ್ಯ ಸಿರಿ ಮೋಹನ್ನ ವಿಠಲನೆಪರನೆಂದರುಹು ಮಾಡಿದ ಸುರ ತರುವಾದ ||3||

No comments:

Post a Comment