Thursday, 17 October 2019

ವಾರಿಜಲಯಪತೆ Vaarijalayapate

ವಾರಿಜಲಯಪತೆ ವಾರಿಜನಾಭನೆ
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರ ಪ್ರಭಾವನೆ
ವಾರಿಜಜಾಂಡದ ಕಾರಣ ದೊರೆಯೆ
ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||
ಮಾರ ಜನಕ ಮುಕುತರೊಡೆಯ ದೇವೈಯ್ಯ ಜೀಯ ||ಅ-ಪ||
ಸ್ಯಂದನವೇರಿ ಬಾಪ್ಪ ರಂಗ ದೇವೋತ್ತುಂಗ
ನಂದ ನಂದನ ಅರಿಮದಭಂಗ ಕರುಣಾಪಾಂಗ
ಸಿಂಧುಶಯನ ಸುಂದರಾಂಗ ಹೇ ನಾರಸಿಂಗ
ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ
ಸನಕ ಸನಂದನಾದಿ ಮುನಿವೃಂದ
ನಿಂದು ಬಂದು ಧಿಂ ಧಿಂ ಧಿಮಿಕೆಂದು
ನಿಂದಾಡಲು ಆನಂದದಿ ಮನಕೆ ||೧||
ಜಗತ್ ಜನ್ಮಾದಿ ಕರ್ತ ಗೋವಿಂದ
ಉದರದಿ ಲೋಕ ಲಘುವಾಗಿ ಧರಿಸಿದ ಮುಕುಂದ
ಭಕುತರ ಮನಕೆ ಝಗ ಝಗಿಸುತ ಪೊಳೆವಾನಂದ ನಿಗಮಾವಳಿಯಿಂದ
ಅಗಣಿತ ಮುನಿಗಣ ನಗ ಖಗ ಮೃಗ ಶಶಿ
ಗಗನಮಣ್ಯಾದ್ಯರು ಸೊಗಸಾಗಿ ಬಗೆ ಬಗೆ
ಪೊಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯ ಮಹಾ ಉರಗ ಗಿರಿವಾಸ ||೨||
ತಡಮಾಡ ಬ್ಯಾಡವೊ ಹೇ ನಲ್ಲ
ವಾಕು ಲಾಲಿಸು ಎನ್ನೊಡೆಯ ಗೋಪಾಲ ವಿಠ್ಠಲ
ದೇವ ಪರಾಕು ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ
ಮಡುವಿನೊಳಗೆ ಗಜ ಮೊರೆಯಿಡಲಾಕ್ಷಣ
ಮಡದಿಗೆ ಹೇಳದೆ ದುಡದುಡನೆ ಬಂದು
ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆಪೊಡವಿಯೊಡಗೂಡಿ ಬೇಗ ||೩

No comments:

Post a Comment