Thursday, 17 October 2019

ಭಾರತಿಭಕುತಿಯನು bharati bakutiyanu

ಭಾರತಿಭಕುತಿಯನು ಕೊಡೆನಗೆಮಾರುತಿಸತಿನೀನು|| ಪ||
ಮೂರು ಲೋಕದೊಳು ಯಾರು ನಿನಗೆಸರಿ ಮಾರಾರಿಗಳಿಂದಾರಾಧಿತಳೆ ||ಅ.ಪ||
ಸುಂದರಿ ಶುಭಕಾರಿ ಸುಮನಸ-ವೃಂದಶೋಭಿತಕಬರಿ
ಮಂದಹಾಸ ಮುಖದಿಂದಲಿ ನೋಡಿ ನಿನ್ನ
ಕಂದನೆಂದು ಎನ್ನ ಮುಂದಕೆ ಕರೆಯೆ||
ವಾಣಿ ಎನ್ನ ವದನದಲ್ಲಿಡುಮಾಣದೆಹರಿಸ್ತವನ
ವೀಣಾಧೃತ ಸುಜ್ಞಾನಿಯೆ ಪಂಕಜ-
ಪಾಣಿಯೆ ಕೋಕಿಲವಾಣಿಯೆ ಎನ್ನಯ ||
ಮಂಗಳಾಂಗಿಯೆ ಎನ್ನಅಂತರಂಗದಲ್ಲಿ ಮುನ್ನ
ತುಂಗವಿಕ್ರಮ ಗೋಪಾಲವಿಠಲನ್ನ
ಹಿಂಗದೆ ನೆನೆವ ಸುಖಂಗಳನು ಕೊಡೆ ||

No comments:

Post a Comment