Tuesday, 15 October 2019

ಉದ್ಭವಿಸಿದ ಕಂಬದಿ udbhavisida kambadi

ಉದ್ಭವಿಸಿದ ಕಂಬದಿ | ಶ್ರೀ ನಾರಸಿಂಹ
ಉದ್ಭವಿಸಿದ ಕಂಬದಿ ||pa||
ಉದ್ಭವಿಸಿದ ಬೇಗ ಪದ್ಮಸಂಭವಪಿತ
ಮುದ್ದು ಬಾಲಕನ ಉದ್ಧರಿಸುವೆನೆಂದು||a.pa||
ದುರುಳನು ಪ್ರಹಲ್ಲಾದನು | ಪರಿಪರಿಯಿಂದ
ಕರಕರಪಡಿಸೆ ಕುವರನ
ನರಹರಿ ಎನ್ನನು ಪೊರೆ ಎಂದು ಮೊರೆಯಿಡೆ
ಸುರರು ನೋಡುತಿರೆ ಭೋರ್ಗರೆಯುತ ಆ ಕ್ಷಣ ||1||
ಎಲ್ಲಿರುವನು ಹರಿ ಎಂದು | ದೈತ್ಯನು ಮಗನ
ಇಲ್ಲಿ ಸ್ಥಂಭದಿ ತೋರೆಂದು
ಖುಲ್ಲನು ಹಿಂಸಿಸೆ ಸರ್ವತ್ರದಿ ಶ್ರೀ-
ನಲ್ಲನಿರುವನೆಂದು ಸಾಧಿಸೆ ಭಕ್ತನು ||2||
ತನಯನ ನುಡಿ ಉಳಿಸಲು | ನರಹರಿ ಹೊಸಲೊಳ್
ಇನನು ತಾ ಮುಳುಗುತ್ತಿರಲು
ದನುಜನ ತೊಡೆಯ ಮೇಲಿಟ್ಟು ನಖದಲಿ
ಕನಲಿ ಸೀಳಿ ಕರುಳ್ಮಾಲೆ ಧರಿಸುತ ||3||
ಸುರರು ಜಯ ಜಯವೆನ್ನುತ | ಪೊಗಳುತ್ತಲಿರೆ
ನರಹರಿ ಉಗ್ರ ತಾಳುತ
ಸುರರು ಬೆದರಿ ಪ್ರಹ್ಲಾದನ ಕಳುಹಲು
ಕರಿಗಿರಿ ನರಹರಿ ಶಾಂತನೆನಿಸಿದ ||4||
ತಾಪವಡಗಿತು ಜಗದಲಿ | ವರ ಭಕ್ತನಿಂದ
ಶ್ರೀಪತಿ ಲಕುಮಿ ಸಹಿತಲಿ
ಗೋಪಾಲಕೃಷ್ಣವಿಠ್ಠಲ ಗುರುವರದ
ಈ ಪರಿಯಿಂದ ಭಕ್ತರ ಪೊರೆಯಲು||5||

No comments:

Post a Comment