Tuesday, 15 October 2019

ನರಸಿಂಹ ವಜ್ರ ಸಿಂಹ Narasimha vajra simha

ನರಸಿಂಹ ವಜ್ರ ಸಿಂಹ
ಸರಸಿಜನಾಭಾ ದಕ್ಷಿಣ ಶರಧಿನಿವಾಸಾ ||pa||
ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು
ಪರಿಯ ದೈವವೆ ಮೊರೆಯೋಗಲೂ
ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು
ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ||1||
ಭುಗಿಲೆನೆ ಧಿಗಿಲೆನೆ ದಿಕ್ಕಿನೆಲಿ ಪ್ರತಿ ಶಬ್ದ ಪುಟ್ಟಿತಿರೆ
ಪಗಲಿರಳು ಒಂದೆಂದರು ಸಕಲರೂ
ಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆ
ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ ||2||
ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆ
ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ
ಕಕ್ಕಸದ ದೈವ ಅನಂತ ಪದುಮನಾಭ
ಮುಕ್ತಿದಾಯಕ ವಿಜಯವಿಠ್ಠಲ ಮಹದಾ3

No comments:

Post a Comment