Monday, 14 October 2019

ಮೊದಲೊಂದಿಪೆ Modalondipa

ಮೊದಲೊಂದಿಪೆ ನಿಮಗೆ ಗಣನಾಥ ||ಪ||
ನಮಗೆ ಬಂದ ವಿಘ್ನಗಳ ಕಳೆ ಗಣನಾಥ |ಅ ಪ|
ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ ಸಂದ ರಣದಲಿ ಗಣನಾಥ |೧|
ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿಮ್ಮ ಪಾದ ಸಾಧಿಸಿದ ರಾಜ್ಯ ಗಣನಾಥ |೨|
ಮಂಗಳ ಮೂರುತಿ ಗುರು ರಂಗವಿಠಲನ್ನ ಪಾದ ಭೃಂಗನೆ ಪಾಲಿಸೊ ಗಣನಾಥ |೩|

No comments:

Post a Comment