Monday, 14 October 2019

ಆರಂಭದಲಿ ನಮಿಪೆ Aarambhadalli Namipe

ಆರಂಭದಲಿ ನಮಿಪೆ ಬಾಗಿ ಶಿರವ
ಹೇರಂಬ ನೀನೊಲಿದು ನೀಡೆನಗೆ – ವರವ ||pa||
ದ್ವಿರದ ವದನನೆ ನಿರುತ | ದ್ವಿರದ ವರದನ ಮಹಿಮೆ
ಹರುಷದಲಿ ಕರಜಿಹ್ವೆ ಎರಡರಿಂದ
ಬರೆದು ಪಾಡುವದಕ್ಕೆ | ಬರುವ ವಿಷ್ನುನವ ತರಿದ
ಕರುಣದಿಂದಲಿ ಎನ್ನ ಕರಪಿಡಿದು ಸಲಹೆಂದು ||1||
ಕುಂಭಿಣಿಜೆ ಪತಿ ರಾಮ | ಜಂಭಾರಿ ಧರ್ಮಜರು
ಅಂಬರಾಧಿಪ ರಕುತಾಂಬರನೆ ನಿನ್ನ ||
ಸಂಭ್ರಮದಿ ಪೂಜಿಸಿದರೆಂಬವಾರುತಿ ಕೇಳಿ
ಹಂಬಲವ ಸಲಿಸೆಂದು | ನಂಬಿ ನಿನ್ನಡಿಗಳಿಗೆ||2||
ಸೋಮಶಾಪದ ವಿಜಿತ | ಕಾಮ ಕಾಮಿತ ದಾತ
ವಾಮ ದೇವನ ತನಯ ನೇಮದಿಂದ
ಶ್ರೀಮನೋಹರನಾಥ ಶಾಮಸುಂದರ ಸ್ವಾಮಿ ನಾಮ
ನೆನೆಯುವ ಭಾಗ್ಯ ಪ್ರೇಮದಲಿ ಕೊಡು ಎಂದು ||3||

No comments:

Post a Comment