Sunday, 6 October 2019

ಮಂಗಳಂ ಜಯ mangalam jaya

ಮಂಗಳಂ ಜಯ ಮಂಗಳಂ
ಮಂಗಳಂ ಜಯ ಮಂಗಳಂ
ಇಂದಿವರಾಕ್ಷಗೆ ಇವರಾಜವರದಗೆ,
ಇಂದಿರಾ ರಮಣ ಗೋವಿಂದ ಹರಿಗೆ
ನಂದನ ಕಂದಗೆ ನವನೀತ ಚೋರಗೆ
ಬೃಂದಾರಕೇಂದ್ರ ಉಡುಪಿಯ ಕೃಷ್ಣಗೆ
ಕ್ಷೀರಾಬ್ಧಿವಾಸಗೆ ಕ್ಷಿತಿಜನ ಪಾಲಗೆ
ಮಾರನ ಪಿತಗೆ ಮಂಗಳ ಮೂರ್ತಿಗೆ
ಚಾರುಚರಣದಿಂದ ಚೆಲುವಗಂಗೆಯ ಪಡೆದ
ಕಾರುಣ್ಯಮೂರ್ತಿ ಕೌಸ್ತುಭಧಾರಿಗೆ
ವ್ಯಾಸಾವತಾರಗೆ ವೇದೋಧ್ಧಾರಗೆ
ವಾಸಿತಾನಂತಪದ ಸಕಲೇಶಗೆ
ವಾಸುದೇವಮೂರ್ತಿ ಪುರಂದರ ವಿಠಲಗೆ
ದಾಸರ ಕಾಯ್ವ ರುಕ್ಮಿಣೀ ರಮಣಗೆ

No comments:

Post a Comment