ಈಗ ಮಡೆಲೋ ರಾಮ ಧ್ಯಾನವ
ಮೂಗನಾಗಿರಬೇಡ ಎಲೆ ಮಾನವ
ಮೂಗನಾಗಿರಬೇಡ ಎಲೆ ಮಾನವ
ಕಾಲನ ಧೂತರು ಕರೆವಾಗ
ನೀ ಕಾಲಗೆಟ್ಟು ಕಣ್ಣು ಬಿಡುತಿರುವಾಗ
ನೀ ಕಾಲಗೆಟ್ಟು ಕಣ್ಣು ಬಿಡುತಿರುವಾಗ
ನಾಲಿಗೆ ಸೆಳಕೊಂಡು ಜ್ಞಾನಕೆಟ್ಟಿರುವಾಗ
ನೀಲವರ್ಣನ ಧ್ಯಾನ ಬರುವುದೇನಯ್ಯ
ನೀಲವರ್ಣನ ಧ್ಯಾನ ಬರುವುದೇನಯ್ಯ
ಸತಿಸುತರೆಂಬ ಸಂದಣಿಯೊಳು
ನೀ ಮತಿಭ್ರಷ್ಟನಾಗುತ ತನ್ನೊಳಗೆ
ನೀ ಮತಿಭ್ರಷ್ಟನಾಗುತ ತನ್ನೊಳಗೆ
ಸತತ ಶ್ರೀ ಲಕ್ಷ್ಮೀಪತಿಯ ನೆನೆದರೆ
ಗತಿ ನೀಡಿ ಪರಮಪದವೀವನಯ್ಯ
ಗತಿ ನೀಡಿ ಪರಮಪದವೀವನಯ್ಯ
ಯಮಧೂತರು ಬಂದು ಎಳೆವಾಗ
ನೀ ನವೆಯುತ ಹೊತ್ತನು ಕಳೆವಾಗ
ನೀ ನವೆಯುತ ಹೊತ್ತನು ಕಳೆವಾಗ
ಸಮದರ್ಶಿ ಪುರಂದರ ವಿಠಲನ ನಾಮವು
ಸಮಯಕೆ ಒದಗಿ ಬರುವುದೇನಯ್ಯ
ಸಮಯಕೆ ಒದಗಿ ಬರುವುದೇನಯ್ಯ
No comments:
Post a Comment