Friday, 18 October 2019

ಕೋಮಲೆ ರಮಾದೇವಿಯ komale rama

ಕೋಮಲೆ ರಮಾದೇವಿಯ ನೋಡಬನ್ನಿರೇ
ಕಮಲಾರಿ ಸಹೋದರಿಯನೀಗ ಬೇಡಬನ್ನಿರೇ ॥ಪ॥
ಇಂದುನಿಭದ ಸುಂದರಿಯರು ಬಂದು ನೋಡಿರೆ
ಈ ಕುಂದರದನೆ ಮಂದರೋದ್ಧರನರ್ಧಾಂಗಿಯೇ ॥೧॥
ಭಕ್ತಿಯಿಂದ ಭಜಿಪರಿಗೆ ಮುಕ್ತಿ ಕೊಡುವಳೇ
ಶಕ್ತಿ ಯುಕ್ತಿಗಳನೆ ಕೊಟ್ಟು ಆರತಿ ಮಾಳ್ಪಲೇ ॥೨॥
ದಾಸರಾದರೆ ಶ್ರೀಶನ ರಾಣಿ ಪೋಷಿಸುವಳೇ
ಗೋಪಾಲವಿಠಲ ಘಾಸಿಮಾಡದೆ ಪೋಷಿಸೆನುವಳೇ ॥೩॥

No comments:

Post a Comment