ಇದೇ ಪಾಲಿಸು ಇದೇ ಪಾಲಿಸು ಇದೇ ಪಾಲಿಸಯ್ಯ|
ಪದುಮ ಸಂಭವ ಪಿತನೆ ಪದೋಪದಿಗೆ ಎಮಗಿಂದು||pa||
ಪದುಮ ಸಂಭವ ಪಿತನೆ ಪದೋಪದಿಗೆ ಎಮಗಿಂದು||pa||
ಜೀವ ಅಸ್ವಾತಂತ್ರ್ಯ ದೇವ ನಿಜ ಸ್ವಾತಂತ್ರ್ಯ
ಜೀವ ಜಡರೆಲ್ಲ ದೇವರಾಧೀನವೆಂದು|
ಜೀವೋತ್ತಮರಲಿ ಭಕುತಿ ಜಡದಲ್ಲಿ ವಿರಕುತಿ
ಕಾವ ಕೊಲ್ಲುವುದೆಲ್ಲ ಶ್ರೀಹರಿ ಎಂಬ ಜ್ಞಾನ||1||
ಜೀವ ಜಡರೆಲ್ಲ ದೇವರಾಧೀನವೆಂದು|
ಜೀವೋತ್ತಮರಲಿ ಭಕುತಿ ಜಡದಲ್ಲಿ ವಿರಕುತಿ
ಕಾವ ಕೊಲ್ಲುವುದೆಲ್ಲ ಶ್ರೀಹರಿ ಎಂಬ ಜ್ಞಾನ||1||
ಬಿಂಬ ಚಲಿಸಿದರೆ ಪ್ರತಿಬಿಂಬ ಚಲಿಸುವುದು
ಬಿಂಬ ಪೂರ್ಣನು ಪ್ರತಿಬಿಂಬನು ಅಲ್ಪ|
ಉಂಬುಡುವ ಕ್ರಿಯೆಗಳನು ಬಿಂಬ ಮಾಡಿಸಲು
ಪ್ರತಿಬಿಂಬಾಖ್ಯವುಂಟೆಂಬ ಬಿಂಬಾಕ್ರಿಯವು ಎನಗೆ||2||
ಬಿಂಬ ಪೂರ್ಣನು ಪ್ರತಿಬಿಂಬನು ಅಲ್ಪ|
ಉಂಬುಡುವ ಕ್ರಿಯೆಗಳನು ಬಿಂಬ ಮಾಡಿಸಲು
ಪ್ರತಿಬಿಂಬಾಖ್ಯವುಂಟೆಂಬ ಬಿಂಬಾಕ್ರಿಯವು ಎನಗೆ||2||
ಬಂಧನಾ ನಿವೃತ್ತಿಯು ಎಂದಿಗೋ ಎನಗೆಂದು
ಸಂದೇಹದಿಂದ ನಾ ಕೇಳಲಿಲ್ಲ|
ಸುಂದರಮೂರುತಿ ಗೋಪಾಲವಿಠ್ಠಲ
ಕುಂದಿಲ್ಲದಲೆ ಎನಗೆ ನವವಿಧ ಭಕುತಿಯ||3||
ಸಂದೇಹದಿಂದ ನಾ ಕೇಳಲಿಲ್ಲ|
ಸುಂದರಮೂರುತಿ ಗೋಪಾಲವಿಠ್ಠಲ
ಕುಂದಿಲ್ಲದಲೆ ಎನಗೆ ನವವಿಧ ಭಕುತಿಯ||3||
No comments:
Post a Comment