ಕೋಲು ಕಾಮನ ಗೆದ್ದ ಕೋಲು ಮಾಯ್ಗಳನೊದ್ದ
ಕೋಲು ಆನಂದಮುನಿ ಪಿಡಿದಿಹ ಕೋಲೆ ||pa||
ಕೋಲು ಆನಂದಮುನಿ ಪಿಡಿದಿಹ ಕೋಲೆ ||pa||
ತಮನೆಂಬುವನ ಕೊಂದು ಕಮಲಜನಿಗೆ ವೇದ
ಕ್ರಮದಿಂದ ಕೊಟ್ಟು ಜಗವನು ಕೋಲೆ
ಕ್ರಮದಿಂದ ಕೊಟ್ಟು ಜಗವನು ರಕ್ಷಿಸಿದ
ವಿಮಲ ಶ್ರೀ ಮತ್ಸ್ಯ ಮನೆದೈವ ಕೋಲೆ ||1||
ಕ್ರಮದಿಂದ ಕೊಟ್ಟು ಜಗವನು ಕೋಲೆ
ಕ್ರಮದಿಂದ ಕೊಟ್ಟು ಜಗವನು ರಕ್ಷಿಸಿದ
ವಿಮಲ ಶ್ರೀ ಮತ್ಸ್ಯ ಮನೆದೈವ ಕೋಲೆ ||1||
ಸುರಪನ ವಿಭವೆಲ್ಲ ಶರಧೀಲಿ ಮುಳುಗಿರೆ
ಗಿರಿಗಹಿ ಸುತ್ತಿ ಕಡೆಯಲು ಕೋಲೆ
ಗಿರಿಗಹಿ ಸುತ್ತಿ ಕಡೆಯಲು ನಗ ಜಾರೆ
ಧರಿಸಿದ ಶ್ರೀ ಕೂರ್ಮ ಮನೆದೈವ ಕೋಲೆ ||2||
ಗಿರಿಗಹಿ ಸುತ್ತಿ ಕಡೆಯಲು ಕೋಲೆ
ಗಿರಿಗಹಿ ಸುತ್ತಿ ಕಡೆಯಲು ನಗ ಜಾರೆ
ಧರಿಸಿದ ಶ್ರೀ ಕೂರ್ಮ ಮನೆದೈವ ಕೋಲೆ ||2||
ಹೊಂಗಣ್ಣಿನವನು ಭೂವೆಂಗಳನೆಳೆದೊಯ್ಯೆ
ಮಂಗಳಮಹಿಮ ದಯದಿಂದ ಕೋಲೆ
ಮಂಗಳ ಮಹಿಮ ದಯದಿಂದ ನೆಗಹಿದ್ಯ
ಜ್ಞಾನoಗ ಶ್ರೀವರಾಹ ಮನೆದೈವ ಕೋಲೆ ||3||
ಮಂಗಳಮಹಿಮ ದಯದಿಂದ ಕೋಲೆ
ಮಂಗಳ ಮಹಿಮ ದಯದಿಂದ ನೆಗಹಿದ್ಯ
ಜ್ಞಾನoಗ ಶ್ರೀವರಾಹ ಮನೆದೈವ ಕೋಲೆ ||3||
ಒಂದೆ ಮನದೊಳಂದು ಕಂದ ನೆನೆಯಲಾಗ
ಬಂದವನಯ್ಯನ್ನೊದೆದನು ಕೋಲೆ
ಬಂದವನಯ್ಯನ್ನೊದೆದನು ಅನಿಮಿತ್ತ
ಬಂಧು ನರಹರಿಯು ಮನೆದೈವ ಕೋಲೆ ||4||
ಬಂದವನಯ್ಯನ್ನೊದೆದನು ಕೋಲೆ
ಬಂದವನಯ್ಯನ್ನೊದೆದನು ಅನಿಮಿತ್ತ
ಬಂಧು ನರಹರಿಯು ಮನೆದೈವ ಕೋಲೆ ||4||
ಎದುರಿಲ್ಲವೆನಗೆಂದು ಮದವೇರಿದವನ ತ್ರಿ
ಪದ ಭೂಮಿ ಬೇಡಿ ಗೆಲಿದನು ಕೋಲೆ
ಪದ ಭೂಮಿ ಬೇಡಿ ಗೆಲಿದಾ ತ್ರಿವಿಕ್ರಮ
ಮುದದ ವಾಮನ ಮನೆದೈವ ಕೋಲೆ ||5||
ಪದ ಭೂಮಿ ಬೇಡಿ ಗೆಲಿದನು ಕೋಲೆ
ಪದ ಭೂಮಿ ಬೇಡಿ ಗೆಲಿದಾ ತ್ರಿವಿಕ್ರಮ
ಮುದದ ವಾಮನ ಮನೆದೈವ ಕೋಲೆ ||5||
ಕುಜನರಳಿದು ಭಾಗ್ಯ ಸುಜನರಿಗೊಲಿದಿತ್ತ
ನಿಜ ತಾತನಾಜ್ಞ ಸಲಹಿದ ಕೋಲೆ
ನಿಜ ತಾತನಾಜ್ಞ ಸಲಹಿದ ಶುಭಗುಣ
ದ್ವಿಜರಾಮ ನಮ್ಮ ಮನೆದೈವ ಕೋಲೆ ||6||
ನಿಜ ತಾತನಾಜ್ಞ ಸಲಹಿದ ಕೋಲೆ
ನಿಜ ತಾತನಾಜ್ಞ ಸಲಹಿದ ಶುಭಗುಣ
ದ್ವಿಜರಾಮ ನಮ್ಮ ಮನೆದೈವ ಕೋಲೆ ||6||
ಕೌಸಲ್ಯೆ ಗರ್ಭದಿ ಜನಿಸಿದ ಕೃಪೆಯಲ್ಲಿ
ಕೌಶಿಕ ಕ್ರತುವ ಕಾಯ್ದನು ಕೋಲೆ
ಕೌಶಿಕ ಕ್ರತುವ ಕಾಯ್ದ ರಾವಣಾಂತಕ
ಶ್ರೀ ಸೀತಾರಾಮ ಮನೆದೈವ ಕೋಲೆ||7||
ಕೌಶಿಕ ಕ್ರತುವ ಕಾಯ್ದನು ಕೋಲೆ
ಕೌಶಿಕ ಕ್ರತುವ ಕಾಯ್ದ ರಾವಣಾಂತಕ
ಶ್ರೀ ಸೀತಾರಾಮ ಮನೆದೈವ ಕೋಲೆ||7||
ಗೋಕುಲದಲಿ ಬೆಳೆದು ಪೋಕ ದನುಜರ ಅ
ನೇಕ ಪರಿಯಲಿ ಸದೆದನು ಕೋಲೆ ಅ
ನೇಕ ಪರಿಯಲಿ ಸದೆದ ಪಾಂಡವಪಾಲ
ಶ್ರೀಕೃಷ್ಣ ನಮ್ಮ ಮನೆದೈವ ಕೋಲೆ ||8||
ನೇಕ ಪರಿಯಲಿ ಸದೆದನು ಕೋಲೆ ಅ
ನೇಕ ಪರಿಯಲಿ ಸದೆದ ಪಾಂಡವಪಾಲ
ಶ್ರೀಕೃಷ್ಣ ನಮ್ಮ ಮನೆದೈವ ಕೋಲೆ ||8||
ಮಿಥ್ಯಾವಾದಿಗಳಿಗೆ ಮಿಥ್ಯವನೆ ಕಲಿಸಿ
ಸತ್ಯವಾದಿಗಳ ಪೊರೆದನು ಕೋಲೆ
ಸತ್ಯವಾದಿಗಳ ಪೊರೆದನು ಅಜವಂದ್ಯ
ಕರ್ತ ಬೌದ್ಧನು ಮನೆದೈವ ಕೋಲೆ ||9||
ಸತ್ಯವಾದಿಗಳ ಪೊರೆದನು ಕೋಲೆ
ಸತ್ಯವಾದಿಗಳ ಪೊರೆದನು ಅಜವಂದ್ಯ
ಕರ್ತ ಬೌದ್ಧನು ಮನೆದೈವ ಕೋಲೆ ||9||
ಸ್ವಾಹಾ ಸ್ವಧಾಕಾರವು ಮಹಿಯೊಳಿಲ್ಲದಾಗೆ
ಸುಹಯವೇರಿ ಕಲಿಯನು ಕೋಲೆ
ಸುಹಯವೇರಿ ಕಲಿಯನೆಳೆದು ಕೊಂದ
ಮಹಾಕಲ್ಕಿ ನಮ್ಮ ಮನೆದೈವ ಕೋಲೆ ||10||
ಸುಹಯವೇರಿ ಕಲಿಯನು ಕೋಲೆ
ಸುಹಯವೇರಿ ಕಲಿಯನೆಳೆದು ಕೊಂದ
ಮಹಾಕಲ್ಕಿ ನಮ್ಮ ಮನೆದೈವ ಕೋಲೆ ||10||
ಹತ್ತವತಾರದಿ ಭಕ್ತಜನರ ಹೊರೆದ
ಮತ್ತಾವಕಾಲದಿ ರಕ್ಷಿಪ ಕೋಲೆ
ಮತ್ತಾವ ಕಾಲದಿ ರಕ್ಷಿಪ ಪ್ರಸನ್ವೆಂಕಟ
ಕರ್ತನ ನಂಬಿ ಸುಖಿಯಾದೆ ಕೋಲೆ||11||
ಮತ್ತಾವಕಾಲದಿ ರಕ್ಷಿಪ ಕೋಲೆ
ಮತ್ತಾವ ಕಾಲದಿ ರಕ್ಷಿಪ ಪ್ರಸನ್ವೆಂಕಟ
ಕರ್ತನ ನಂಬಿ ಸುಖಿಯಾದೆ ಕೋಲೆ||11||
No comments:
Post a Comment