Thursday, 17 October 2019

ಗುರುಸತ್ಯನಾಥರ guru sathyanaartharu

 ಸತ್ಯನಾಥ ತೀರ್ಥರು

ಕೊಂಡಾಡಲಳವೆ ಕರುಣಾನಿಧಿ ಕಾವನ
ದಂಡ ಸಂಜಿತ ಗುರುಸತ್ಯನಾಥರ ಕೀರ್ತಿ ||pa||
ಶ್ರೀ ವಾಸುದೇದ ತಾ ಭಾವಿಸಿ ಚಿತ್ತದಿ
ಭೂವಲಯಕೆ ಸುಜನಾವಳಿಗಾಶ್ರಯ
ವೀವೆನೆನುತ ಶುಭದೇವವೃಕ್ಷವನಟ್ಟೆ
ಈವರ ಪರಮಹಂಸಾವಲಂಬನ ತಾಳ್ದು
ಶ್ರೀ ವಾಯುಮತದಿ ತತ್ವವೆ ಲಕ್ಷಿಸುವ ಪ್ರೇ
ಕ್ಷಾವಂತರಾಗಿಹ ಜೀವಕೋಟಿಗಳ ಕೃ
ಪಾವಲೋಕನದೊಳಿಟ್ಟ ಅಪೇಕ್ಷಿತ
ಭಾವಾರ್ಥಗಳನೆ ಕೊಟ್ಟು ನಂಬಿದ
ಸೇವಕರ್ಗಭಯವಿಟ್ಟ ಗುರುರಾಯನ ||1||
ಭಾನು ತೋರುವ ಮುನ್ನೆ ಸ್ನಾನವ ಮಾಡಿ ಸು
ಮ್ಮಾನದಿಂದಲಿ ನೇಮ ಮೌನದೊಳಿದ್ದು ಶ್ರೀ
ಮಾನಾಥನಂಘ್ರಿಯ ಮಾನಸದಲಿ ದೃಢ
ಧ್ಯಾನದಿಂ ಬಲಿದು ಗೀರ್ವಾಣ ಭಾಷ್ಯಾಮೃತ
ಪಾನವ ಜನರಿಗೆ ಸಾನುರಾಗದಲಿತ್ತು
ನಾನಾ ತತ್ವಾರ್ಥ ವ್ಯಾಖ್ಯಾನವ ಜನರಿಗೆ
ತಾನಂದು ಬೋಧಿಸಿದ ತಾಮಸ
ಜ್ಞಾನವನೋಡಿಸಿದ ಆ ಕಾಮಧೇನು
ವೆನಿಸಿ ಎಸೆದ ಗುರುರಾಯನ ||2||
ಭೇದವರ್ಜಿತ ಮತ್ತವಾದ ಕುಂಭಿಯ ಕುಂಭ
ಭೇದಕ ಸಿಂಗ ಹಲಾಧಾರಿ ಹರಿ ಸಗು
ಣೋದರ ಸಾಕಾರ ಮಾಧವ ಹರನುತ
ಪಾದನೆನುತ ಸೂತ್ರ ವೇದ ಪುರಾಣದಿ
ಸಾಧಿಸಿ ಕುತ್ಸಿತವಾದಿಗಳ
ಪಾದಾಕ್ರಾಂತರ ಮಾಡಿ ಮೇದಿನಿಯೊಳು ಜಯ
ನಾದಭೇರಿಯ ಹೊಯಿಸಿದ ಮುಕ್ತಿಯ
ಸಾಧನ ತೋರಿಸಿದ ಭ್ರಷ್ಟಂಕು
ರೋದಯ ಮಾಣಿಸಿದ ಗುರುರಾಯನ ||3||
ಕಾಲಕಾಲಕೆ ಧರ್ಮ ಪಾಲಿಸಿ ಯಾಚಕ
ಜಾಲಕೆ ಮನ್ನಿಸಿ ಮೂಲ ಮಂತ್ರೋಪದೇಶ
ಪೇಳಿ ಪೂತರ ಮಾಡಿ ಹಾಲು ಸಕ್ಕರೆ ತುಪ್ಪ
ಹೋಳಿಗ್ಯನ್ನವನಿಕ್ಕಿ ಮೇಲೆ ದ್ರವ್ಯವನಿತ್ತು
ಪಾಲಿಸಿ ತಾಯಿತಂದೆಗಳ ಹಂಬಲ ಬಿಡಿ
ಸಿ ಲೋಕದವರಿಗಭಿಲಾಷಾ ಪೂರ್ಣಾನು
ಕೂಲ ಚಿಂತಾಮಣಿಯ ಯತಿಕುಲ
ಮೌಳಿ ಮಕುಟಮಣಿಯ ವಿರತಿಭಾಗ್ಯ
ಶಾಲಿ ಸುಗುಣಖಣಿಯ ಗುರುರಾಯನ ||4||
ಮಣ್ಣು ವನಿತೆ ಸತಿ ಹೊನ್ನಿನ ಬಯಕೆಯ
ಘನ್ನತೆ ಜರಿದು ಪಾವನ್ನ ಮಹಿಮನಾದ
ಚೆನ್ನ ಸತ್ಯನಿಧಿ ತೀರಥನ್ನ ಕರೋದ್ಭವ
ತನ್ನಾಕಷೆಂಬುವಭಿನ್ನವಚಂದ್ರಿಕೆ
ಯನ್ನು ಪ್ರಕಾಶಿಸಿ ಪೂರ್ಣಚಂದ್ರಮನಂತೆ
ಉನ್ನತ ಕಳೆಯುತ ಚಿನ್ಮಯ ವರದ ಪ್ರ
ಸನ್ನ ವೆಂಕಟಾಧಿಪನ ಭಜಿಸಿ ನಿತ್ಯ
ಧನ್ಯನೆನಿಸುತಿಪ್ಪನ ಸತ್ಯಾಭಿನವ
ರನ್ನನ ಪೊರೆದÀಪ್ಪನ ಗುರುರಾಯನ ||5|

No comments:

Post a Comment