Thursday, 31 October 2019

ಕೀರ್ತಿಸಿ ಜನರೆಲ್ಲ keertisi janarella

ಕೀರ್ತಿಸಿ ಜನರೆಲ್ಲ ಹರಿಯ ಗುಣ ಪ
ಕೀರ್ತಿಸಿ ಜನರು ಕೃತಾರ್ಥರಾಗಿರೊ ಅ.ಪ
ಆವನು ವನದೊಳಗೆ ನಿತ್ಯದಿಬಾಹ ಜನರ ಬಡಿದುಜೀವನ ಮಾಳ್ಪ ಕಿರಾತನು ಕೀರ್ತಿಸೆತಾ ಒಲಿದಾತನ ಕೋವಿದನೆನಿಸಿದ 1
ಆವನ ಪಾದರಜ ಸೋಕಲುಆ ವನಿತೆಯ ಜಡಭಾವವ ತೊಲಗಿಸಿ ಆ ವನಿತೆಯನುಪಾವನ ಮಾಡಿದ ದೇವಾಧಿದೇವನ 2
ಅಂದು ಶಬರಿ ತಾನು ಪ್ರೇಮದಿತಿಂದ ಫಲವ ಕೊಡಲುಕುಂದು ನೋಡದೆ ಆನಂದದೆ ಗ್ರಹಿಸಿಕುಂದದ ಪದವಿಯನಂದು ಕೊಟ್ಟವನ3
ದÀುಷ್ಟ ರಾವಣ ತಾನು ಸುರರಿಗೆಕಷ್ಟಬಡಿಸುತಿರಲುಪುಟ್ಟಿ ಭವನದೊಳು ಕುಟ್ಟಿ ಖಳರ ಸುರ-ರಿಷ್ಟವ ಸಲಿಸಿದ ಸೃಷ್ಟಿಗೊಡೆಯನ 4
ತನ್ನ ನಂಬಿದ ಜನರ ಮತ್ತೆ ತಾ-ನನ್ಯರಿಗೊಪ್ಪಿಸದೆಮುನ್ನಿನಘವ ಕಳೆದಿನ್ನು ಕಾಪಾಡುವಘನ್ನ ಮಹಿಮ ಶ್ರೀರಂಗವಿಠಲನ 5

No comments:

Post a Comment