Thursday, 31 October 2019

ಕಂತುಪಿತನೆ ನಿನ್ನ kantupitane ninna

ಕಂತುಪಿತನೆ ನಿನ್ನ ಎಂತು ವರ್ಣಿಪೆ ಲಕ್ಷ್ಮೀ -ಕಾಂತ ಪಾಲಿಸೆನ್ನನು ನಿರಂತರದಲಿ ಪ
ಕುಂತಿಪುತ್ರಗೆ ನೀನತ್ಯಂತ ಸಾರಥಿತ್ವವ ಮಾಡಿನಿಂತು ದುರ್ಯೋಧನನ ಶಿರವ ಅಂತಕನಿಗೊಪ್ಪಸಿದ ಧೀರ ಅ.ಪ
ಸುಂದರವದನ ನಿನ್ನ ಕಂದ ಭಜಿಸಲು ಮುದದಿಂದ ಕಂಬದೊಳ್ಬಂದೆ ಮಂದರೋದ್ಧರಸಿಂಧುಶಾಯಿ ರಕ್ಕಸನ ಕೊಂದು ಕರುಳ ಮಾಲೆಯನ್ನುಚೆಂದದಿಂ ಕಂಧರದೊಳ್ಧರಿಸಿದಾನಂದಮೂರ್ತಿ ಇಂದಿರೇಶ1
ಜಂಭವೈರಿ ಮುಖ್ಯ ಸುರ ಕದಂಬ ಪೂಜಿತಾಂಘ್ರಿಯುಗಳನಂಬಿದ ಭಕ್ತರ ಕಾಯ್ವ ಅಂಬುಜನೇತ್ರಅಂಬರೀಷ ದ್ವಾದಶಿ ವ್ರತವ ಸಂಭ್ರಮದಿ ಮಾಡುತಿರೆಡೊಂಬಿಯಿಂ ದೂರ್ವಾಸ ಶಪಿಸೆ ಬೆಂಬಿಡದೆ ಚಕ್ರದಿ ಸಲಹಿದ2
ಗಂಗೆಯ ಜನಕ ನಿನ್ನ ಅಂಗನೆ ದ್ರೌಪದಿದೇವಿಭಂಗಬಿಡಿಸೆಂದು ಕೂಗೆ ಮಂಗಳಾಂಗನೆಸಾಂಗದಿಂದ ವಸ್ತ್ರಂಗಳ ಹಿಂಗದೆ ಪಾಲಿಸಿದಂಥರಂಗವಿಠಲ ಪಾಲಿಸೀಗ ತುಂಗ ವಿಕ್ರಮ ಎನ್ನ ಮಾತ 3

No comments:

Post a Comment