Sunday, 6 October 2019

ಇಷ್ಟುದಿನ ಈ ವೈಕುಂಠ ishtu dina vaikunta

ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ
ಎಂಟು ಏಳರ ಕಳೆದುದರಿಂದೆ
ಭಂಟರೈವರ ತುಳಿದುದರಿಂದೆ
ತುಂಟಕನೊಬ್ಬನ ತರಿದುದರಿಂದೆ
ಭಂಟನಾಗಿ ಬಂದೆನೋ ಶ್ರೀರಂಗಷಾಯೀ
ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ನಾ ಕಂಡೆ
ದುರ್ಜನಾಂತಕನೆ ಶ್ರೀರಂಗಷಾಯೀ
ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆ ಆದಿಕೇಶವನ ನಾ ಕಂಡೆ

No comments:

Post a Comment