Tuesday, 22 October 2019

ಇಂತು ಶ್ರುತಿ - ಸ್ಮøತಿ ಸಾರುತಿದೆ ಕೋ intu shruti smriti sarutide

ಇಂತು ಶ್ರುತಿ - ಸ್ಮøತಿ ಸಾರುತಿದೆ ಕೋ |
ಕಂತುಪಿನ ಗುಣಗಳ ತಿಳಿಯಬೇಕೆಂದು ಪ.
ಮನವ ಶ್ರೀಹರಿಯ ಚರಣಕೆ ಸಮರ್ಪಿಸಬೇಕು |
ತನುವ ತೊಂಡರಿಗಡ್ಡ ಕೆಡವಬೇಕು ||
ವನಿತೆಯರ ಚೆಲುವಿಕೆಗೆ ಮರುಳಾಗದಿರಬೇಕು |
ಘನತೆಯಲಿ ಹರಿ ಚರಣ ಸ್ಮರಿಸುತಿರಬೇಕು 1
ಕಂದರ್ಪನಟ್ಟುಳಿಗೆ ಕಳವಳಿಸದಿರಬೇಕು |
ಇಂದ್ರಿಯಂಗಳನು ನಿಗ್ರಹಿಸಬೇಕು |
ಚಂದಲೀಲೆಗಳಿಂಗೆ ಮನವೆಳಿಸದಿರಬೇಕು |
ಇಂದಿರೇಶನ ಪದದ ಪಥವರಿಯಬೇಕು 2
ಒಂಟಿಯಲಿ ಮುನಿಗಳಾಶ್ರಮದಿ ನೆಲೆಸಲುಬೇಕು |
ಹೆಂಟೆ ಬಂಗಾರ ಸಮ ತಿಳಿಯಬೇಕು ||
ಕಂಟಕದ ಭಯಗಳನು ನೀಗುತಿರಬೇಕು ವೈ - |
ಕುಂಠ ಪುರಂದರವಿಠಲನೊಲಿಸಬೇಕು 3

No comments:

Post a Comment