Tuesday, 22 October 2019

ಇನ್ನೂ ದಯ ಬಾರದೇ innu days baarade

ಇನ್ನೂ ದಯ ಬಾರದೇ-ದಾಸನ ಮೇಲೆ-
ಇನ್ನೂ ದಯ ಬಾರದೇ ಪ
ಮುನ್ನ ಮಾಡಿದ ದುಷ್ಕರ್ಮಗಳೆಲ್ಲವ
ಮನ್ನಿಸಿ ಕಳೆವುದು ಇಂದಿರೆಯ ರಮಣಾ ಅ.ಪ
ನಾನಾ ಜನ್ಮಗಳಲಿ ನಾನಾ ಜಾತಿಗಳಲಿ
ನಾನಾ ಯೋನಿಗಳಲಿ ಜನಸಿ ಜನಿಸಿ ದೇವಾ ||
ನಾನು ನನ್ನದು ಎಂದು ನರಕದೊಳಗೆ ಬಿದ್ದು
ನೀನೆ ಗತಿಯೆಂದು ಸ್ಮರಣೆ ಮಾಡಿದ ಮೇಲೆ 1
ಕಾಮಾದಿ ಷಡುವರ್ಗ ಗಾಢಾಂಧಕಾರದಿ
ಪಾಮರನಾಗಿ ಇದ್ದಂಥ ಪಾತಕನ ||
ರಮಾಮನೋಹರ ಹರಿ ನೀನೇ ಗತಿಯೆಂದು
ನಾಮಾಮೃತವನು ಪಾನ ಮಾಡಿದ ಮೇಲೆ 2
ಏನ ಓದಿದರೇನು ಏನ ಕೇಳಿದರೇನು
ಈ ನಾಮ ಸ್ಮರಣೆಗೆ ಸರಿಬಾರದು ||
ಙÁ್ಞನಹೀನನ ಮೇಲೆ ದಯವಿಟ್ಟು ಪಾಲಿಸುದೀನ ದಯಾಕರ ಪುರಂದರ ವಿಠಲನೆ 3

No comments:

Post a Comment