Monday, 21 October 2019

ಆರ ಹಾರೈಸಿದರೇನುಂಟು Aara haraisidarenuntu

ಆರ ಹಾರೈಸಿದರೇನುಂಟು - ಉರಿ
ನೀರ ಕಡೆದರಲ್ಲೇನುಂಟು ? ಪ.
ಅಂತರವರಿಯದ ಅಧಮನ ಬಾಗಿಲ
ನಿಂತು ಕಾಯ್ದರಲ್ಲೇನುಂಟು
ಎಂತಾದರಲ್ಲಿಯ ತುಪ್ಪ ಸಾಧಿಸಿ ಯಮ
ನಂತೆ ಕೊಲುವರಲ್ಲೇನುಂಟು ? 1
ಕೊಟ್ಟೆ - ಕೊಟ್ಟೆನೆಂದು ಕೊಡದುಪಚಾರದ
ಭ್ರಷ್ಟನ ಸೇರಿದರೇನುಂಟು
ಬಿಟ್ಟೆಯ ಮಾಡಿಸಿ ಬೆದರಿಸಿ ಬಿಡುವ ಕ
ನಿಷ್ಟನ ಸೇರಿದರೇನುಂಟು ? 2
ಪಿಸುಣನ ಕುದುರೆಯ ಮುಂದೋಡಲು ಬಲು
ಬಿಸಿಲಿನ ಹಣ್ಣಲ್ಲದೇನುಂಟು
ವಸುಧೆಯೊಳಗೆ ಪುರಂದರವಿಠಲನ ಭ
ಜಿಸಲು ಮುಕ್ತಿಸಾಧನವುಂಟು 3

No comments:

Post a Comment