Sunday, 20 October 2019

ಆಜ್ಞೆಯಿಂದಾಳಬೇಕಣ್ಣ Aajneyindalabekanna

ಆಜ್ಞೆಯಿಂದಾಳಬೇಕಣ್ಣ - ಗಂಡ
ನಾಜ್ಞೆಯ ಮೀರಿ ನಡೆವ ಲಂಡಹೆಣ್ಣ ಪ.
ಅತ್ತೆ - ಮಾವನಿಗಂಜದವಳ - ತನ್ನ
ಉತ್ತಮ ಪುರುಷನ ಜರಿದು ಝಂಕಿಪ
ಭೃತ್ಯರ ಕಂಡು ಬಾಧಿಪಳ - ನಡು
ನೆತ್ತಿಯಿಂದಲೆ ಮೂಗ ಕೆತ್ತಬೇಕವಳ 1
ಹಟ್ಟಿ - ಹಟ್ಟಿ ತಿರುಗುವಳ - ತನ್ನ
ಗಟ್ಟಿತನದಿ ಮಾಕು ಮಲುಕು ನುಡಿಯುವಳ
ಬಿಟ್ಟಕುಚವ ತೋರಿಸುವಳ - ಇನ್ನು
ಹುಟ್ಟು ಹುಟ್ಟಿಲಿ ಬಾಯಿ ಕುಟ್ಟಬೇಕವಳ 2
ಎಂದೂ ಈ ಪರಿಯಿರುವವಳ - ಇನ್ನು
ಕೊಂದು ಮಾಡುವುದೇನು ಬಿಡಬೇಕವಳ
ಒಂದಿಷ್ಟು ಗುಣವಿಲ್ಲದವಳ - ಪು
ಪುರಂದರವಿಠಲರಾಯನಗಲ್ಲದವಳ 3

No comments:

Post a Comment