Monday, 21 October 2019

ಆಡ ಹೋಗಲು ಬೇಡವೊ-ರಂಗಯ್ಯ Aadahogalu rangayya

ಆಡ ಹೋಗಲು ಬೇಡವೊ-ರಂಗಯ್ಯ |ಬೇಡಿಕೊಂಬೆನು ನಿನ್ನನು ಪಆಡ ಹೋಗಲುಬೇಡ ಗಾಡಿಕಾರ್ತಿಯರೊಳು |ಕೂಡಿ ಕೆಡಲು ಬೇಡವೊ-ರಂಗಯ್ಯ ಅ.ಪನೀರೊಳು ಮುಳುಗೆಂಬರೊ-ನಿನ್ನನು ದೊಡ್ಡ |ಭಾರವ ಹೊರು ಎಂಬರೊ ||ಕೋರೆದಾಡೆಗಳಿಂದ ಸೀಳಿ ರಕ್ಕಸನೊಡಲ |ಹಾರವ ಹಾಕೆಂಬರೊ-ರಂಗಯ್ಯ 1
ಪೊಡವಿಯನಳೆಯೆಂಬರೊ-ನಿನಗೆ ದೊಡ್ಡ |ಕೊಡಲಿಯ ಪಿಡಿಯೆಂಬರೊ ||ಕಿಡಿಗಣ್ಣ ರುದ್ರನ ವರದ ದಶಕಂಠನ |ಮಡುಹಿ ನೀ ಬಾರೆಂಬರೊ-ರಂಗಯ್ಯ 2
ಬೆಟ್ಟವನೆತ್ತಂಬರೊ-ನಿನ್ನನು ಬರಿ-|ಬಟ್ಟಾಗಿ ತಿರುಗೆಂಬರೊ ||ಪುಟ್ಟ ತೇಜಿಯನೇರಿ ನಲಿನಲಿದಾಡುತ |ದಿಟ್ಟ ಪುರಂದರವಿಠಲ-ರಂಗಯ್ಯ3

No comments:

Post a Comment