Monday, 30 March 2020

ಕರವ ಮುಗಿದ-ಮುಖ್ಯಪ್ರಾಣ-ಕರವ


ಕರವ ಮುಗಿದ-ಮುಖ್ಯಪ್ರಾಣ-ಕರವ ಮುಗಿದ ಪ
ಕರವ ಮುಗಿದ ಶ್ರೀಹರಿಗೆ ತಾನೆದುರಾಗಿ
ದುರುಳರ ಸದೆದು ನೀ ಶರಣರ ಪೊರೆಯೆಂದು ಅ.ಪ
ಜೀವೇಶ್ವರೈಕ್ಯವು ಜಗತು ಮಿಥ್ಯವೆಂದು
ಈ ವಿಧ ಪೇಳುವ ಮಾಯಿಗಳನಳಿಯೆಂದು 1
ಇಲ್ಲಿ ಮಾತ್ರ ಭೇದ ಅಲ್ಲಿ ಒಂದೇಯೆಂಬ
ಕ್ಷುಲಕರನು ಪಿಡಿದು ಹಲ್ಗಳ ಮುರಿಯೆಂದು 2
ತಾರತಮ್ಯ ಪಂಚಭೇದ ಸತ್ಯವೆಂದು
ಮಾರುತ ಮತ ಪೊಂದಿದವರನು ಪೊರೆಯೆಂದು 3
ಪರಿಪರಿ ಭಕ್ತರು ಹೃದಯ ಕಮಲದೊಳು
ನಿರುತ ಮಾಡುವ ಪೂಜೆ ನಿನಗರ್ಪಿತವೆಂದು 4
ಹರಿಯ ಮನೋಗತವರಿತು ಮಾಡುವೆನೆಂದು
ಪುರಂದರ ವಿಠಲನ ಚರಣದ ಬಳಿಯಲ್ಲಿ 5


No comments:

Post a Comment