Sunday, 29 March 2020

ಈ ಸಿರಿಯ ನಂಬಿ ಹಿಗ್ಗಲಿ ಬೇಡ ಮನವೇ


ಈ ಸಿರಿಯ ನಂಬಿ ಹಿಗ್ಗಲಿ ಬೇಡ ಮನವೇ ಪ.
ವಾಸುದೇವನ ಭಜಿಸಿ ಸುಖಿಯಾಗು ಮನವೇ ಅಪ
ಮಡದಿ ಮಕ್ಕಳು ಎಂದು ವಡವೆ ವಸ್ತುಗಳೆಂದು
ಸಡಗರದಿ ತಾಕೊಂಡು ಭ್ರಮಿಸಲೇಕೆ
ಬಿಡದೆ ಯಮನಾಳುಗಳು ಬಾ ಎಂದು ಎಳೆವಾಗ
ಮಡದಿ ಮಕ್ಕಳು ಕಡೆಗೆ ತೊಲಗುವರೊ ಮರುಳೆ 1
ನೆಂಟರೊಳಗೆ ಪೋಗಿ ನಾಲ್ಕು ದಿನವಿದ್ದರೆ
ಎಂಟು ದಿನದಾಯಾಸ ಪೋಗುವಂತೆ
ಉಂಟು ಸೌಭಾಗ್ಯವೆಂತೆಂಬ ಧೈರ್ಯವ ಬಿಟ್ಟು
ವೈಕುಂಠನ ಭಜಿಸು ನೀ ಭ್ರಷ್ಟ ಮನವೆ 2
ಉಂಟು ಆಶ್ರಯವೆಂದು ಬಡವನ ಕರೆತಂದು
ಕೊಟ್ಟು ಮಾಡಿದ ಧರ್ಮ ಫಲ ನನ್ನದು
ಇಷ್ಟಮೂರುತಿ ನಮ್ಮ ಪುರಂದರವಿಠಲನ
ನಿಷ್ಠೆಯಿಂದಲಿ ಭಜಿಸು ದುಷ್ಟಮನವೆ* 3


No comments:

Post a Comment