Thursday, 26 March 2020

ಆರೇನ ಮಾಡುವರು ಭುವನದೊಳಗೆ Aarenu maaduvadu bhuvandolage


ಆರೇನ ಮಾಡುವರು ಭುವನದೊಳಗೆ | ಪೂರ್ವಜನ್ಮದ ಕರ್ಮ ಪಣೆಯಲ್ಲಿ ಬರೆದುದಕೆ \\ಪ\\
ಮಾಡಿದಡಿಗೆಯದು ಕೆಡಲು ಮನೆಯ ಗಂಡನು ಬಿಡಲು | ಕೊಡಿ ಇದ್ದಾಸತಿಯ ಕುಣಿಸಾಡಲು ||
ಗೋಡೆಯಲಿ ಬರೆದ ಹುಲಿ ಘುಡುಘುಡಿಸಿ ತಿನಬರಲು | ಆಡದಂತಹ ಮಾತ ಅಖಿಳರೂ ನಿಜವೆನಲು \\1\\
ಹೆತ್ತಾತಾಯ್ ಕರೆದು ಮಕ್ಕಳಿಗೆ ವಿಷ ಹಾಕಿದರೆ | ಮತ್ತೆ ತಂದೆಯ ಕರೆದು ಹೊರಗೆ ಮಾರಿದರೆ ||
ತೊತ್ತು ಅರಸಿಗೆ ಪ್ರತಿ - ಉತ್ತರವ ನಡೆಸಿದರೆ | ಕತ್ತಲೆ ಕರಡಿಯಾಗಿ ಬೆನ್ನಟ್ಟಿ ಕಟ್ಟಿದರೆ \\2\\
ಹೊಲಬೇಲಿ ಮೇದರೆ - ಮೊಲ ಎದ್ದು ಇರಿದರೆ ತಲೆಗೆ ತನ್ನಯ ಕೈಯ ಪೆಟ್ಟು ತಾಗಿದರೆ ||
ಹೆಳಲು ಹಾವಾದರೆ - ಗೆಳೆಯ ರಿಪುವಾದರೆ | ಕಲಿಸಿದ್ದ ಅವಲಕ್ಕಿ ಕಲಪರಟಿ ನುಂಗಿದರೆ \\3\\
ಕಣ್ಣೊಳಗಿನಾ ಬೊಂಬೆ ಕಚ್ಚಾಡ ಬಂದರೆ | ಹೆಣ್ಣಿನಾ ಹೋರಾಟ ಹೆಚ್ಚಾದರೆ ||
ಅನ್ನ ಉಣ್ಣದ ಮನುಜಗಜೀರ್ಣವಾದರೆ | ಪುಣ್ಯತೀರ್ಥಂಗಳಲಿ ಪಾಪ ಘಟಿಸಿದರೆ \\4\\
ಏರಿ ಕುಳಿತಾ ಕುಂಬೆ ಎರಡಾಗಿ ಬಿಚ್ಚಿದರೆ | ವಾರಿಧಿಗಳು ಉಕ್ಕಿ ಮೇರೆ ಮೀರಿದರೆ ||
ಆರಿದಾ ಇದ್ದಲಿಯು ಅಗ್ನಿಯಾಗುರಿದರೆ | ಧೀರ ಪುರಂದರ ವಿಠಲನ ದಯವು ತಪ್ಪಿದರೆ \\5\\


No comments:

Post a Comment