Sunday, 29 March 2020

ಏಳಯ್ಯ ಶ್ರೀಹರಿ ಬೆಳಗಾಯಿತು


ಏಳಯ್ಯ ಶ್ರೀಹರಿ ಬೆಳಗಾಯಿತು ಪ.
ಏಳು ದೇವಕಿತನಯ ನಂದನಕಂದ
ಏಳು ಗೋವರ್ಧನ ಗೋವಳರಾಯ ||
ಏಳು ಮಂದರಧರ ಗೋವಿಂದ ಫಣಿಶಾಯಿ
ಏಳಯ್ಯ ನಲಿದು ಉಪ್ಪವಡಿಸಯ್ಯ 1
ಕ್ಷಿರಸಾಗರವಾಸ ಬೆಳಗಾಯಿತು ಏಳು
ಮೂರುಲೋಕದರಸು ಒಡೆಯ ಲಕ್ಷ್ಮೀಪತಿ ||
ವಾರಿಜನಾಭನೆ ದೇವ ದೇವೇಶನೆ
ಈರೇಳು ಲೋಕಕಾಧಾರ ಶ್ರೀ ಹರಿಯೇ 2
ಸುರರು ದೇವತೆಗಳು ಅವಧಾನ ಎನುತಿರೆ
ಸುರವನಿತೆಯರೆಲ್ಲ ಆರತಿ ಪಿಡಿದರೆ ||
ನೆರೆದು ಊರ್ವಶಿ ಭರದಿ ನಾಟ್ಯವಾಡಲು
ಕರುಣಿಸೊ ಪುರಂದರವಿಠಲ ನೀನೇಳೋ 3


No comments:

Post a Comment