Monday, 30 March 2020

ಕಡುಕೃಪೆಯಿಂದ ಹರಿ ಒಲದರೆ ಸತ್ಯದ


ಕಡುಕೃಪೆಯಿಂದ ಹರಿ ಒಲದರೆ ಸತ್ಯದ
ನಡೆವಳಿ ಮೌನವೆ ಸಾಕ್ಷಿ
ದೃಡ ಭಕ್ತರಿಗುಣಬಡಿಸಿದಂಥವರಿಗೆ
ಷಡುರ ಸ್ನಾನವೇ ಸಾಕ್ಷಿ ಪ
ಅನ್ನದಾನ ಮಾಡಿದ ಮನುಜಗೆ - ದಿ
ವ್ಯಾನ್ನವುಂಬುವುದೇ ಸಾಕ್ಷಿ
ಅನ್ನದಾನ ಮಾಡದ ಮನುಜಗೆ - ಸರ
ರನ್ನಕೆ ಬಾಯ್ಬಿಡುವುದೆ ಸಾಕ್ಷಿ 1
ಕನ್ಯಾದಾನ ಮಾಡದ ಮನುಜಗೆ ಚೆಲ್ವ
ಹೆಣ್ಣಿನ ಭೋಗವೇ ಸಾಕ್ಷಿ
ಕನ್ಯಾದಾನ ಮಾಡದ ಮನುಜಗೆ - ಪರ
ಹೆಣ್ಣಿನ ಹೋರಾಟವೇ ಸಾಕ್ಷಿ 2
ಪರರಿಗೊಂದು ತಾನೊಂದುಂಬುವರಿಗೆ
ಜ್ವರ - ಗುಲ್ಮ ರೋಗವೇ ಸಾಕ್ಷಿ
ಪರಿಪರಿ ವಿಧದಿಂದ ಹಿರಿಯರ ದೂರುವಗೆ
ತಿರಿದು ತಿಂಬುವುದೇ ಸಾಕ್ಷಿ 3
ಕಂಡ ಪುರುಷಗೆ ಕಣ್ಣಿಡುವ ಸತಿಯು - ತನ್ನ
ಗಂಡನ ಕಳೆಯುದೇ ಸಾಕ್ಷಿ
ಪುಂಡತನದಿ ಪರ ಹೆಂಗಳೆನುಳುಪುವಗೆ
ಹೆಂಡಿರು ಕಳೆವುದೇ ಸಾಕ್ಷಿ 4
ಕ್ಷೇತ್ರದಾನದ ಮಾಡಿದ ಮನುಜಗೆ - ಏಕ
ಛತ್ರದ ರಾಜ್ಯವೇ ಸಾಕ್ಷಿ
ಮುಕ್ತಿ ಪಡೆದು ತಿಳಿ ಪುರಂದರವಿಠಲನ
ಭಕ್ತನಾಗುವುದೇ ಸಾಕ್ಷಿ 5


No comments:

Post a Comment