Sunday, 29 March 2020

ಏನನಿತ್ತು ಮೆಚ್ಚಿಸುವೆನು ಏನೋ ವಿಠಲ


ಏನನಿತ್ತು ಮೆಚ್ಚಿಸುವೆನು ಏನೋ ವಿಠಲ ಪ
ಮಾನಿನಿಯರಸ ನಿನ್ನ
ನಾಮವೆನ್ನ ನೆನೆವೆನಯ್ಯ ಅ.ಪ
ಓದಿ ನಿನ್ನ ಮೆಚ್ಚಿಸುವೆನೆ ವೇದವನ್ನು ಅಜನಿಗಿತ್ತೆ
ವಾದಿಸಿ ನಿನ್ನ ಮೆಚ್ಚಿಸುವೆನೆ ಆದಿಶೇಷಶಯನನೆ 1
ಆಡಿ ನಿನ್ನ ಮೆಚ್ಚಿಸುವೆನೆ ಮೃಡನಯ್ಯನಯ್ಯನೆ
ಪಾಡಿ ನಿನ್ನ ಮೆಚ್ಚಿಸುವೆನೆ ಪವನಜನೊಡೆಯನೆ 2
ಚಿನ್ನವಿತ್ತು ಮೆಚ್ಚಿಸುವೆನೆ ಸಿರಿದೇವಿಯ ರಮಣನೆಪೂರ್ಣಾನಂದ ಙÁ್ಞನಿ ನೀನೆ ಪುರಂದರ ವಿಠಲಯ್ಯ 3


No comments:

Post a Comment