Sunday, 29 March 2020

ಈಗಲೆ ಭಜಿಸಲೆ ಜಿಹ್ವೆ - ನೀ -


ಈಗಲೆ ಭಜಿಸಲೆ ಜಿಹ್ವೆ - ನೀ - |
ಜಾಗುಮಾಡದೆ ಶ್ರೀ ಹರಿಪಾದಾಂಬುಜವ ಪ.
ದೇಹದೇಹ ಸಂಬಂಧಿಗಳು - ಅವರು |
ಮೋಹಬದ್ಧರಾಗಿ ಕುಳಿತಿಹರು ||
ಆಹಾರ ಗುಹ್ಯೇಂದ್ರಿಯವೆಂಬ ಎರಡರ |
ಬೇಹಾರದಲಿ ನೀನು ಮುಳುಗಿಸದಲೆ ಮನ 1
ಮರಣ ತೊಡಗಿ ನಾಲಗೆಯುಡುಗಿ - ನಿನ್ನ - |
ತರುಣಿ ಪುತ್ರ ಮಿತ್ರರಳುತಿರಲು ||
ಕೊರಳೊಳು ಗುರುಗುರು ಗುರುಗುಟ್ಟುವಾಗ ನರ - |
ಹರಿಯ ನಾಮವೆನ್ನಗೊಡದೆಲೊ ಪ್ರಾಣಿ 2
ಅಸಿಪತ್ರವನದೊಳು ಹೊಗಿಸಿ - ನಿನ್ನ - |
ಬಸೆವಸೆಖಂಡ ಹೊರವೊಡಿಸಿ |
ಬಿಸಿಬಿಸಿ ನೆತ್ತರು ಬಸಿದು ಹೋಗುವಾಗ |
ಕುಸುಮನಾಭನ ನಾಮ ನೆನೆಯಗೊಡದು ಮನ 3
ತಪ್ತಲೋಹದ ಮೋಲೊರಗಿಸಿ - ನಿನ್ನ - |
ಕತ್ತರಿಸಿದ ಖಂಡ ಬೇಯಿಸುವರು ||
ನೆತ್ತಿಯ ಕೊರೆದು ನಾಲಗೆ ಹಿರಿದೊಗೆವಾಗ |
ಚಿತ್ತಜನಯ್ಯನ ನೆನೆಯಗೊಡದು ಮನ 4
ಕುಂಭಿಪಾಕದೊಳಗೆ ಕುದಿಸಿ - ನಿನ್ನ |
ಅಂಬುಮೊನೆಗಳಿಂದಿರಿಯಿಸಿ ||
ಅಂಬರಕೊಗೆಯ ಕಾಗೆಯು ಕಚ್ಚಿ ಕಡಿÁಗ |
ಅಂಬುಜಾಕ್ಷನ ನಾಮ ನೆನೆಯಗೊಡದು ಮನ 5
ದುರುಳ ಯವದೂತರಾರ್ಭಟಿಸಿ - ನಿನ್ನ - |
ಎರಕದ ಕಾಯ್ದ ಕಂಬಕೆ ತಕ್ಕೆಗೆಯ್ಸಿ ||
ಪರಿಪರಿ ಭವದೊಳು ಬಳಲಿಸುತಿರುವಾಗ |
ಪುರುಷೋತ್ತಮನ ನಾಮ ನೆನೆಯಗೊಡದು ಮನ 6
ದುರಿತಕೋಟಿಗಳ ಹರಿಸುವ - ನಿನ್ನ - |
ನರಕಬಾಧೆಗಳ ತಪ್ಪಿಸುವ ||
ಪರಮ ಪುರುಷ ನಮ್ಮ ಪುರಂದರವಿಠಲನ |
ನಿರುತದಿ ನೆನೆದು ನೀ ಸುಖಿಯೊಗೋ ಮನವೆ 7


No comments:

Post a Comment