Sunday, 29 March 2020

ಈ ಜೀವನಿಂದು ಫಲವೇನು |


ಈ ಜೀವನಿಂದು ಫಲವೇನು |
ರಾಜೀವಲೋಚನನ ಮರೆದಿಹ ತನುವಿನಲಿ ಪ.
ಅರುಣನುದಯಲೆದ್ದು ಹರಿಸ್ಮರಣೆಯ ಮಾಡಿ |
ಗುರು - ಹಿರಿಯರ ಚರಣಕಮಲಕೆರಗಿ ||
ಪರಮಶುಚಿಯಾಗಿ ನದಿಯಲಿ ಮಿಂದು ರವಿಗಘ್ಯ |
ವೆರೆಯದೆ ಮರೆಹ ಈ ಪಾಪಿತನುವಿನಲಿ 1
ಹೊನ್ನಗಿಂಡಿಯಲಿ ಅಗ್ರೋದಕವನೆ ತಂದು |
ಚೆನ್ನಾಗಿ ಹರಿಗೆ ಅಭಿಷೇಕ ಮಾಡಿ ||
ರನ್ನದುಡಿಗೆಯುಡಿಸಿ ರತುನಗಳಳವಡಿಸಿ |
ಕಣ್ಣಿರಲು ನೋಡಲರಿಯದ ಪಾಪಿತನುವಿನಲಿ 2
ನಳನಳಿಸುವ ನಾನಾ ಪುಷ್ಪಗಳು ಶ್ರೀತುಳಸಿ |
ಹೊಳೆವ ಕಿರೀಟ ಕೊರಳಲಿ ಪದಕ ||
ನಳಿನಾಕ್ಷನಿಗೆ ಕರ್ಪುರದಾರತಿಯನೆತ್ತಿ |
ಕಳೆಯ ನೋಡಲರಿಯದ ಪಾಪಿತನುವಿನಲಿ 3
ವರಭಕ್ಷ್ಯಗಳು ಪರಮಾನ್ನ ಶಾಲ್ಯನ್ನವು |
ವರವಾದ ಮಧು ಘೃತ ಕ್ಷೀರವನ್ನು ||
ಸಿರಿನಾರಾಯಣಗೆ ಸಮರ್ಪಣೆ ಮಾಡಿ ತಾ - |
ಎರಡು ಕೈಮುಗಿಯದ ಪಾಪಿತನುವಿನಲಿ 4
ಉರಗಾದ್ರಿ - ಸ್ವಾಮಿಪುಷ್ಕರಣಿಗಳು ಮೊದಲಾದ |
ಪರಿಪರಿ ತೀರ್ಥಗಳನೆಲ್ಲ ಮಿಂದು ||
ತಿರುವೆಂಗಳಪ್ಪ ಶ್ರೀ ಪುರಂದರವಿಠಲನ |
ಚರಣವನು ಭಜಿಸಲಯದ ಪಾಪಿತನುವಿನಲಿ 5


No comments:

Post a Comment