ಅರಿಯಧಮನ ಸಂಗ ಕರಗಿದ್ದ ಹಿತ್ತಾಳೆ ಒರೆದು ನೋಡಲು ಬಣ್ಣ ಬರುವುದೇ ಹೇಳಿ ಪ.
ಮಂಜುನೀರನೆ ತಂದು ತಂದನವ ಹದಮಾಡಿ ಒಂದಾಗಿ ಕೂಡಿ ಪರಿಮಳವ ಬೇಗ
ಹಂದಿಯನು ಕರೆದು ಸೆಲೆ - ಪೊಸಲು ಅದು ತನ್ನ ಗಂಜಲವ ನೆನೆನೆನೆದು ಹೋಹಂತೆ ರಮಣಿ \\1\\
ಚೀನಿಕೋಲನೆ ತಂದು ಕೊರೆದು ತುಂಡನೆ ಮಾಡಿ ಶ್ವಾನನನು ಕರೆದು ಬಾಯೊಳಗಿರಿಸಲು
ತಾನದನು ಸವಿಸವಿದು ನೋಡಲರಿಯದ ತನ್ನ ದನದ ಮೂಳೆಯ ನೆನೆದು ಹೋಹಂತೆ ರಮಣಿ \\2\\
ಅಂತರವನರಿಯದಲೆ ಮಿಯಾ ಹೋಗುವುದರಿಂದ ಅಂತೆ ಇರುವುದೇ ಲೇಸು ಬಹು ಪ್ರೌಢರು
ಚಿಂತಿತಾರ್ಥವನೀವ ಸುಗುಣ ಪುರಂದರವಿಠಲ ನೆಂತೆಂತು ಭಜಿಸಿದರೆ ಅಂತಂತೊಲಿವನಲ್ಲರೆ \\3\\
No comments:
Post a Comment